ಮೈಸೂರು

ನಟ ದುನಿಯಾ ವಿಜಯ್ ಅವರ ವೈಯುಕ್ತಿಕ ತೇಜೋವಧೆ ಮಾಡಲು ಯತ್ನಿಸುತ್ತಿರುವ ಹುನ್ನಾರ ಖಂಡಿಸಿ ಪ್ರತಿಭಟನೆ

ಮೈಸೂರು,ಸೆ.26:- ಕನ್ನಡ ಚಲನಚಿತ್ರ ನಟ ದುನಿಯಾ ವಿಜಯ್ ಅವರ ವೈಯುಕ್ತಿಕ ತೇಜೋವಧೆ ಮಾಡಲು ಯತ್ನಿಸುತ್ತಿರುವ ಹುನ್ನಾರವನ್ನು ಖಂಡಿಸಿ ಕನ್ನಡ ಕ್ರಾಂತಿದಳ ಪ್ರತಿಭಟನೆ ನಡೆಸಿತು.

ನಿನ್ನೆ ಅಗ್ರಹಾರವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮಾತನಾಡಿ ಇತ್ತೀಚಿಗೆ ನಡೆದ ಬೆಳವಣಿಗೆಯಲ್ಲಿ ಹಳೆ ವೈಷಮ್ಯವನ್ನು ವೈಯುಕ್ತಿಕವಾಗಿ ತೆಗೆದುಕೊಂಡು ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ಕನ್ನಡ ಚಲನಚಿತ್ರ ನಟ ದುನಿಯಾ ವಿಜಯ್ ಅವರ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಈ ವಿಚಾರವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನಕ ತೆಗೆದುಕೊಂಡು ಹೋಗಿ ಅವರ ಮುಂದಿನ ಭವಿಷ್ಯಕ್ಕೆ ತೊಂದರೆ ಕೊಡುವ ಪ್ರಯತ್ನ ಮಾಡುತ್ತಿದ್ದು ದುನಿಯಾ ವಿಜಯ್ ಅವರಿಗೆ ರಾಜ್ಯದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇದನ್ನು ಗಮನಿಸಿ ದುನಿಯಾ ವಿಜಯ್ ಅವರ ಅಭಿಮಾನಿಗಳ ಪರವಾಗಿ ನಿಂತು ದುನಿಯಾ ವಿಜಯ್ ಅವರು ಮಾಡಿಲ್ಲದ ತಪ್ಪಿಗೆ ಅವರನ್ನು ಹೊಣೆ ಮಾಡಬಾರದು ಎಂದು ಕನ್ನಡ ಕ್ರಾಂತಿದಳದಿಂದ  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಯುವಘಟಕದ ಅಧ್ಯಕ್ಷ ತೇಜಸ್ವಿ ಕುಮಾರ್ , ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರವಿಂದ್ ಶರ್ಮ , ಹಿರಿಯ ಹೋರಾಟಗಾರಾದ ಸತ್ಯಪ್ಪ , ಸಮಾಜ ಸೇವಕರಾದ  ಜಿ ಶ್ರೀಧರ , ರಾಮು ,ಮಂಜು ಶಿವರಾಮ್ , ಮಂಜುನಾಥ್ ಪೈ , ತಿಲಕ್  ಹಾಗೂ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: