ಕ್ರೀಡೆದೇಶ

ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸೈನಾ ನೆಹ್ವಾಲ್-ಪರುವಲ್ಲಿ ಕಶ್ಯಪ್

ಹೈದರಾಬಾದ್,ಸೆ.26-ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಆಟಗಾರರಾದ ಸೈನಾ ನೆಹ್ವಾಲ್ ಮತ್ತು ಪರುಪಲ್ಲಿ ಕಶ್ಯಪ್ ಡಿಸೆಂಬರ್ 16 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಮದುವೆಗೆ ಕೇವಲ 100 ಮಂದಿಯನ್ನಷ್ಟೇ ಆಹ್ವಾನಿಸಲಾಗುತ್ತದೆ. ಡಿ.21 ರಂದು ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೈದ್ರಾಬಾದ್ ನ ಈ ಜೋಡಿ ಹತ್ತು ವರ್ಷಗಳಿಂದ ಸಂಬಂಧ ಹೊಂದಿದ್ದರು. ಆದರೆ ಕಿಡಂಬಿ ಶ್ರೀಕಾಂತ್, ಎಚ್.ಎಸ್.ಪ್ರಣಯ್ ಹಾಗೂ ಗುರುಸಾಯಿದತ್ ಬಳಗದೊಂದಿಗೆ ಕಾಣಿಸಿಕೊಳ್ಳುವ ಮೂಲಕ ರಹಸ್ಯ ಬಚ್ಚಿಟ್ಟುಕೊಂಡಿದ್ದರು. ಇದುವರೆಗೆ ಇಬ್ಬರೂ ಸಂಬಂಧವನ್ನು ದೃಢಪಡಿಸಿರಲಿಲ್ಲ ಅಥವಾ ನಿರಾಕರಿಸಿರಲೂ ಇಲ್ಲ.

ವಿವಾಹವು ಮತ್ತೊಂದು ಕ್ರೀಡಾ ಜೋಡಿಗೆ ಸಾಕ್ಷಿಯಾಗಲಿದೆ. ದೀಪಿಕಾ ಪಲ್ಲಿಕಲ್ದಿನೇಶ್ ಕಾರ್ತಿಕ್, ಇಶಾಂತ್ ಶರ್ಮಾಪ್ರತಿಮಾ ಸಿಂಗ್, ಗೀತಾ ಪೋಗಟ್ಪವನ್ ಕುಮಾರ್, ಸಾಕ್ಷಿ ಮಲಿಕ್ಸತ್ಯಾವರ್ತ್ ಕದಿಯನ್ ಇತ್ತೀಚಿನ ವರ್ಷಗಳಲ್ಲಿ ವಿವಾಹ ಬಂಧನಕ್ಕೊಳಗಾದ ಕ್ರೀಡಾಜೋಡಿಗಳು.

28 ವರ್ಷದ ಸೈನಾ ಹಾಗೂ 32 ವರ್ಷದ ಕಶ್ಯಪ್, ಬ್ಯಾಡ್ಮಿಂಟನ್ ಸೂಪರ್ ಜೋಡಿ ಎನಿಸಿದ ಇಂಡೋನೇಷ್ಯಾದ ಸೂಸಿ ಸುಸಾಂತಿ ಮತ್ತು ಅಲನ್ ಬುಡಿಕುಸುಮಾ, ಚೀನಾದ ಲೀ ಡೆನ್ ಹಾಗೂ ಕ್ಸಿ ಕ್ಸಿಂಗ್ಫಾಂಗ್, ಬ್ರಿಟಿಷ್ ಜೋಡಿ ಕ್ರಿಸ್ ಗಾಬ್ಬೆ ಅಡ್ಕಾಕ್ ಹಾಗೂ ಬಾಕ್ ಹೋಮ್, ಮಧುಮಿತಾ ಗೋಸ್ವಾಮಿವಿಕ್ರಮ್ ಸಿಂಗ್ ಭಿಷ್ಟ್, ಸೈಯದ್ ಮೋದಿಅಮಿತಾ ಕುಲಕರ್ಣಿ ಜೋಡಿಯನ್ನು ಅನುಕರಿಸಲಿದೆ. (ಎಂ.ಎನ್)

Leave a Reply

comments

Related Articles

error: