ದೇಶಪ್ರಮುಖ ಸುದ್ದಿ

ಚೆಕ್ ಬೌನ್ಸ್ ಪ್ರಕರಣವನ್ನು ಜಾಮೀನು ರಹಿತ ಅಪರಾಧಗಳ ಪಟ್ಟಿಗೆ ಸೇರಿಸಲು ಕೇಂದ್ರದ ಚಿಂತನೆ

ನೋಟು ನಿಷೇಧದ ಮೂಲಕ ನಗದು ರಹಿತ ವಹಿವಾಟಿಗೆ ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸರಕಾರ ಚೆಕ್ ಬೌನ್ಸ್ ಕಾನೂನನ್ನು ಕಠಿಣಗೊಳಿಸಲು ಕಾಯ್ದೆಗೆ ತಿದ್ದುಪಡಿ ತರಲಿದೆ. ಈ ಪ್ರಕರಣವನ್ನು ಜಾಮೀನು ರಹಿತ ಅಪರಾಧಗಳ ಪಟ್ಟಿಗೆ ಸೇರಿಸಲು ಚಿಂತನೆ ನಡೆಸಿದೆ. ಮಸೂದೆಯನ್ನು ಸಂಸತ್‍ನ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.

ಸರಕಾರದ ಮೂಲಗಳ ಪ್ರಕಾರ ದೇಶದಲ್ಲೇ 18.3 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಇದರ ವಿಚಾರಣೆಯಲ್ಲೇ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತಿದೆ. ಚೆಕ್ ಬೌನ್ಸ್ ಪ್ರಕರಣ ಕುರಿತಂತೆ ಅದು ನಡೆದ ವ್ಯಾಪ್ತಿಯಲ್ಲೇ ವಿಚಾರಣೆ ನಡೆಯಬೇಕೆಂದು 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ, ಪ್ರಕರಣ ತ್ವರಿತ ವಿಲೇವಾರಿ ತಡವಾಗುತ್ತಿದೆ.

ವರ್ತಕರ ಸಂಸ್ಥೆಗಳ ನಿಯೋಗವು ಹಣಕಾಸು ಸಚಿವಾಲಯದ ಮುಖ್ಯಸ್ಥರನ್ನು ಭೇಟಿ ಮಾಡಿದ ಸಂದರ್ಭ, ವ್ಯಾಪಾರ, ವಹಿವಾಟುಗಳನ್ನು ನಡೆಸಲು ಇಂತಹ ಕ್ರಮದ ಅಗತ್ಯವಿದೆ ಎಂದು ಸರಕಾರವನ್ನು ಒತ್ತಾಯಿಸಿತ್ತು ಎನ್ನಲಾಗಿದೆ. ಬೌನ್ಸ್ ಆದ ತಿಂಗಳೊಳಗೆ ಚೆಕ್ ನೀಡಿದ ಗ್ರಾಹಕನಿಗೆ ಶಿಕ್ಷೆಯಾಗಬೇಕೆಂಬುದು ನಿಯೋಗದ ಸಲಹೆ ಎಂದು ಮೂಲಗಳು ತಿಳಿಸಿವೆ.

Leave a Reply

comments

Related Articles

error: