ಮೈಸೂರು

ಸೆ.28ರಂದು ರಂಗಪ್ರಭ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಸಮಾರಂಭ

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ಡಿ ಅಭಿನಂದನಾ

ಮೈಸೂರು,ಸೆ.26 : ರಂಗಪ್ರಭ ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಸಮಾರಂಭ ಹಾಗೂ ನೂತನ ಸಚಿವರ ಅಭಿನಂದನಾ ಕಾರ್ಯಕ್ರಮ ಸೆ. 28ರ ಬೆಳಿಗ್ಗೆ 11.30ಕ್ಕೆ ಕಲಾಮಂದಿರದಲ್ಲಿ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ಎಚ್.ವಿ. ಗಣೇಶ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಹಾಗೂ ಸಾಂಸ್ಕೃತಿಕ ವೇದಿಕೆಯನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ತನ್ವೀರ್ ಸೇಠ್, ಎಲ್.ನಾಗೇಂದ್ರ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪದ್ಮಶೇಖರ್, ನಟ ಶಿವರಾಜ್ ಕೆ.ಆರ್. ಪೇಟೆ, ವಿಮರ್ಶಕ ಡಾ. ಮಳಲಿ ವಸಂತ್‌ಕುಮಾರ್, ರಂಗ ಸಾಹಿತ್ಯ ಪ್ರಕಾಶಕ ಎಚ್.ಎಸ್. ಗೋವಿಂದೇಗೌಡ, ಪ್ರಗತಿ ಪರ ರೈತ ಸುಬ್ಬೇಗೌಡ ಅವರನ್ನು ಸನ್ಮಾನಿಸಲಾಗುವುದೆಂದು ತಿಳಿಸಿದರು.

ಕಾರ್ಯದರ್ಶಿ ಚಿನಕುರಳಿ ಸಿ. ಸಿದ್ದಲಿಂಗೇಗೌಡ, ಕೆ.ಬಿ. ಬೋರೇಗೌಡ, ನಾಗೇಂದ್ರ, ವೆಂಕಟೇಶ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: