ಮೈಸೂರು

‘ಅನುವಾದ ಮತ್ತು ರಾಷ್ಟ್ರ’ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಮೈಸೂರು,ಸೆ.26:- ಅನುವಾದ ಮತ್ತು ರಾಷ್ಟ್ರ ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ರಾಷ್ಟ್ರೀಯ ಅನುವಾದ ಮಿಷನ್ (ಎನ್.ಟಿ.ಎಂ.), ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (ಸಿ.ಐ.ಐ.ಎಲ್.), ಮೈಸೂರಿನಲ್ಲಿಂದು ಹಮ್ಮಿಕೊಳ್ಳಲಾಗಿದೆ.

ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮವು ಸಂಸ್ಥೆಯ ಎಲ್.ಡಿ.ಸಿ.ಐಲ್. ಕಾನ್ಫರೆನ್ಸ್ ಹಾಲ್, (2ನೇ ಮಹಡಿ) ನಲ್ಲಿ ನಡೆಯಿತು.  ವಿಶ್ವಸಂಸ್ಥೆಯು ಸೆಪ್ಟೆಂಬರ್ 30ನೇ ದಿನಾಂಕವನ್ನು ಅಂತರರಾಷ್ಟ್ರೀಯ ಅನುವಾದ ದಿನ ಎಂದು ಘೋಷಿಸಿದ್ದು, ಈ ದಿನದ ನೆನಪಿಗೋಸ್ಕರ ಈ ವಿಚಾರಣಾ ಸಂಕಿರಣವನ್ನು ಏರ್ಪಡಿಸಲಾಗಿದೆ.

ಎನ್.ಟಿ.ಎಂ. ಒಂದು ಮಿಷನ್ ಆಗಿ ದೇಶದಲ್ಲಿ ಅನುವಾದವನ್ನು ಒಂದು ಉದ್ಯಮವಾಗಿ ಸ್ಥಾಪಿಸಲು ಬದ್ಧವಾಗಿದೆ. ರಾಷ್ಟ್ರತ್ವ, ರಾಷ್ಟ್ರ ನಿರ್ಮಾಣ, ಬಹುರಾಷ್ಟ್ರೀಯ ಗುರುತುಗಳು, ಜಾಗತೀಕರಣಗೊಂಡ ನಾಗರಿಕ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಅನುವಾದದ ಪಾತ್ರ ಮತ್ತು ಮಹತ್ವವನ್ನು ಕುರಿತು ಚರ್ಚಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಅಲ್ಲದೆ, ಅನುವಾದ ಅಧ್ಯಯನದ ಶಿಸ್ತಿನಲ್ಲಿ ಉದ್ಭವಿಸುತ್ತಿರುವ ಮತ್ತು ಸಂಬಂಧಪಟ್ಟ ವಿವಿಧ ಪ್ರಶ್ನೆಗಳ ಬಗ್ಗೆಯೂ ಈ ವಿಚಾರ ಸಂಕಿರಣದಲ್ಲಿ ಚರ್ಚಿಸಲಾಗುತ್ತಿದೆ

ಸಿ.ಐ.ಐ.ಎಲ್. ನಿರ್ದೇಶಕರಾದ ಪ್ರೊಫೆಸರ್ ಡಿ. ಜಿ. ರಾವ್ ಅನುವಾದ ಮತ್ತು ರಾಷ್ಟ್ರ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಪ್ರೊ. ಟಿ.ಎಸ್. ಸತ್ಯನಾಥ್, ಪ್ರೊಫೆಸರ್ ಎಮೆರಿಟಸ್, ಆಧುನಿಕ ಭಾರತೀಯ ಭಾಷೆಗಳು ಮತ್ತು ಸಾಹಿತ್ಯ ಅಧ್ಯಯನ ವಿಭಾಗ, ದೆಹಲಿ ವಿಶ್ವವಿದ್ಯಾಲಯ, ದೆಹಲಿ, ಇವರು ಆಶಯ ಭಾಷಣ ಮಾಡಿದರು. ಡಾ. ತಾರಿಖ್ ಖಾನ್, ಪ್ರಭಾರ-ಅಧಿಕಾರಿ, ಎನ್.ಟಿ.ಎಂ. ಇವರು ಗಣ್ಯರು ಮತ್ತು ಪ್ರಬಂಧ ಮಂಡಿಸುವವರನ್ನು ಸ್ವಾಗತಿಸಿದರಲ್ಲದೇ, ವಿಚಾರ ಸಂಕಿರಣದ ಕಿರುಪರಿಚಯ ಮಾಡಿಕೊಟ್ಟರು. ಪ್ರೊ. ಶಿವರಾಮ ಪಡಿಕ್ಕಲ್, ಪ್ರಾಧ್ಯಾಪಕರು, ಸಿ.ಎ.ಎಲ್.ಟಿ.ಎಸ್., ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್, ಪ್ರೊ. ಪಿ. ಪಿ. ಗಿರಿಧರ, ವಿಶ್ರಾಂತ ಪ್ರಾಧ್ಯಾಪಕರು ಮತ್ತು ಉಪ ನಿರ್ದೇಶಕರು, ಸಿ.ಐ.ಐ.ಎಲ್., ಮೈಸೂರು, ಪ್ರೊ. ಸಿ. ಎನ್. ಶ್ರೀನಾಥ್, ಮುಖ್ಯಸ್ಥರು, ಧ್ವನ್ಯಾಲೋಕ, ಸೆಂಟರ್ ಫಾರ್ ಇಂಡಿಯನ್ ಸ್ಟಡೀಸ್, ಮೈಸೂರು. ಇವರು ಮುಖ್ಯ ಗೋಷ್ಠಿ ನಡೆಸಿಕೊಡಲಿದ್ದು, ವಿಭಿನ್ನ ಸಂಶೋಧನಾ ವಿಷಯಗಳನ್ನು ಪ್ರತಿನಿಧಿಸುವ ದೇಶದ ವಿವಿಧ ಸಂಸ್ಥೆಗಳ 20 ಕ್ಕೂ ಹೆಚ್ಚಿನ ವಿದ್ವಾಂಸರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ವಿಚಾರ ಸಂಕಿರಣ ಎರಡು ದಿನಗಳ ಕಾಲ ನಡೆಯಲಿದೆ. (ಎಸ್.ಎಚ್)

Leave a Reply

comments

Related Articles

error: