ಮೈಸೂರು

ಸಂಕಲ್ಪ್ ಗ್ರೂಪ್ಸ್ ಕನ್‍ಸ್ಟ್ರಕ್ಷನ್‍ ನಿಂದ ಎಲೆಕ್ಟ್ರಿಕಲ್ ಗುತ್ತಿಗೆದಾರನಿಗೆ ಮೋಸ: ಕಾನೂನು ಕ್ರಮದ ಎಚ್ಚರಿಕೆ

ಮೈಸೂರಿನ ಸಂಕಲ್ಪ್ ಗ್ರೂಪ್ಸ್ ಕನ್‍ಸ್ಟ್ರಕ್ಷನ್‍ರವರು ಬೆಂಗಳೂರಿನ ವರದ ಎಲೆಕ್ಟ್ರಿಕಲ್ಸ್ ಜೊತೆಯಿದ್ದ ಗುತ್ತಿಗೆ ಒಪ್ಪಂದವನ್ನು ಮೀರಿ ವರ್ತಿಸುತ್ತಿದ್ದು ಸಂಸ್ಥೆಗೆ ನೀಡಬೇಕಾದ ಬಾಕಿ ಹಣ ನೀಡದೆ ಕಾನೂನುಬಾಹಿರವಾಗಿ ವ್ಯವಹರಿಸುತ್ತಿದೆ ಎಂದು ಕಾನೂನು ಸಲಹೆಗಾರ ಯೋಗನರಸಿಂಹನ್ ಆರೋಪಿಸಿದರು.

ಅವರು ಸೋಮವಾರ ಪತ್ರಕರ್ತರ ಭವನದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಸಂಕಲ್ಪ್ ಗ್ರೂಪ್ಸ್‍ ಕಂಪನಿಯೂ ಯಾದವಗಿರಿಯ ಎರಡನೇ ಹಂತದಲ್ಲಿ 272 ಅಪಾರ್ಟ್‍ಮೆಂಟ್‍ಗಳ ಎಲೆಕ್ಟ್ರಿಕ್ ಗುತ್ತಿಗೆಯನ್ನು ಸಂಸ್ಥೆಗೆ ನೀಡಿತ್ತು, ಶೇ.75ರಷ್ಟು ಕೆಲಸವೂ ಮುಗಿದಿದ್ದು ಲಾಭ ಬರುವ ಹಂತದಲ್ಲಿ ಕಾರಣ ನೀಡದೆ ಕಂಪನಿಯ ಗುತ್ತಿಗೆಯನ್ನು ರದ್ದುಗೊಳಿಸಿ ಒಪ್ಪಂದದ ವಿರುದ್ಧ ಹೊರಹಾಕಿದ್ದು ಇದರಿಂದ ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದರು.

ನಮಗೆ ಸೇರಿದ ಎಲೆಕ್ರ್ರಿಕಲ್ ವಸ್ತು – ಉಪಕರಣಗಳನ್ನು ಅನುಮತಿ ಇಲ್ಲದೆ ಉಗ್ರಾಣದ ಬೀಗ ಒಡೆದು ತೆಗೆದುಕೊಂಡಿದ್ದಾರೆ. ಕರಾರಿನಂತೆ ಮನವಿ ಮಾಡಿದರೂ ಸ್ಪಂದಿಸದೆ ಬಾಕಿ ಇರುವ 96 ಲಕ್ಷ ರೂಪಾಯಿ ಹಣ ನೀಡದೆ ಸರ್ವಾಧಿಕಾರಿ ಧೋರಣೆ ತೋರುತ್ತಿದೆ ಎಂದು ವರದ ಎಲೆಕ್ಟ್ರಿಕಲ್ಸ್ ನ ಮಾಲೀಕ ಎಂ.ಎಸ್.ಯಶಸ್ ಆರೋಪಿಸಿದರು.

ಈ ಬಗ್ಗೆ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು ಸಾಮಾನ್ಯವರ್ಗದ ಗ್ರಾಹಕರ ಹಿತದೃಷ್ಟಿಯಿಂದ ತಡೆಯಾಜ್ಞೆ ತರದಂತೆ ಮಾನವೀಯತೆ ತೋರುತ್ತಿದ್ದೇವೆ. ಕಂಪನಿಯೂ ಎಚ್ಚೆತ್ತುಕೊಂಡು ಬಾಕಿ ಇರುವ ಹಣ ನೀಡಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಇಓ ಶಿವಶಂಕರ್, ಆಡಳಿತ ಮಂಡಳಿಯ ಪ್ರಕಾಶ್ ಉಪಸ್ಥಿತರಿದ್ದರು.

Leave a Reply

comments

Related Articles

error: