ಸುದ್ದಿ ಸಂಕ್ಷಿಪ್ತ

ಎನ್.ಎಸ್ಎಸ್ ಘಟಕದ ಸುವರ್ಣ ಮಹೋತ್ಸವ : ನಾಳೆ ಉದ್ಘಾಟನೆ

ಮೈಸೂರು,ಸೆ.26 : ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ನಾಳೆ (27)ರ ಮಧ್ಯಾಹ್ನ 2 ಗಂಟೆಗೆ ನಟರಾಜ ಸಭಾಭವನದಲ್ಲಿ ಏರ್ಪಡಿಸಲಾಗಿದೆ.

ನಟರಾಜ ಪ್ರತಿಷ್ಠಾನದ ಅಧ್ಯಕ್ಷರಾದ ಶ‍್ರಿ ಚಿದಾನಂದ ಸ್ವಾಮೀಜಿ ಸಾನಿಧ್ಯ, ಮಂಡ್ಯ ಜಿಲ್ಲೆಯ ತೆಂಡೇಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹೇಶ‍್ ಹರವೆ ಉದ್ಘಾಟಿಸುವರು. ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಕೆ.ಸತ್ಯನಾರಾಯಣ ಇರುವರು. ಪ್ರಾಂಶುಪಾಲೆ ಕೆ.ಎನ್.ರಾಣಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮಾಧಿಕಾರಿ ವಿ.ಡಿ.ಸುನೀತಾರಾಣಿ ಹಾಜರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: