ಮೈಸೂರು

ಅಂಗಡಿಗಳ ರೋಲಿಂಗ್ ಶೆಟ್ಟರ್ ಮೀಟಿ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ

ಮೈಸೂರು,ಸೆ.27:-  ಇತ್ತೀಚಿಗೆ ಮೈಸೂರು ನಗರದ ಸರಸ್ವತಿಪುರಂ, ಕುವೆಂಪುನಗರ, ಉದಯಗಿರಿ, ನಜರ್‍ಬಾದ್, ವಿಜಯನಗರ ಠಾಣಾ ವ್ಯಾಪ್ತಿಗಳಲ್ಲಿ ಅಂಗಡಿಗಳ ರೋಲಿಂಗ್ ಶೆಟ್ಟರ್ ಮೀಟಿ ಕಳ್ಳತನ ಮಾಡುತ್ತಿದ್ದ ಪ್ರಕರಣಗಳು ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಪ್ರಕರಣಗಳ ಪತ್ತೆಗಾಗಿ ನಗರದ ಪೊಲೀಸ್ ಆಯುಕ್ತರು ಅಪರಾಧ ವಿಭಾಗದ ಡಿ.ಸಿ.ಪಿ.ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಒಂದು ವಿಶೇಷ ತಂಡವನ್ನು ರಚಿಸಿದ್ದರು.

ಕಾರ್ಯತತ್ಪರರಾದ ಈ ಸೆ.21ರಂದು ಬೆಂಗಳೂರಿನ ದೇವನಹಳ್ಳಿಯ ಮುಖ್ಯ ರಸ್ತೆಯಲ್ಲಿ ಹಾಗೂ ಮಹದೇಶ್ವರ ಬೆಟ್ಟದಿಂದ ಆರೋಪಿಗಳಾದ ಗಂಗಾಧರ @ ಅಪ್ಪಿ ಬಿನ್ ಲೇಟ್ ಮಂತಪ್ಪ, (28),ಕಾರ್ನಾಳ ಗ್ರಾಮ, ತೂಬುಗೆರೆ ಪೋಸ್ಟ್, ಬೆಂಗಳೂರು ಗ್ರಾಮಾಂತರ ಜಿಲ್ಲೆ,  ವೆಂಕಟೇಶ ತಂದೆ ವೆಂಕಟರಾಮು,  (34), ಪೂಜನಹಳ್ಳಿ ಗ್ರಾಮ, ಕುಂದಾಣ ಕಸಬಾ ಹೋಬಳಿ, ಕನ್ನಮಂಗಲ ಪಂಚಾಯಿತಿ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ,ಸಂತೋಷ್ ಸಿ.ಎಸ್. ತಂದೆ ಶ್ರೀನಿವಾಸ, (27), ಚನ್ನಮಾನಹಳ್ಳಿ, ರಾಮನಗರ ತಾಲೂಕು, ರಾಮನಗರ ಜಿಲ್ಲೆ, ಚಕ್ರವರ್ತಿ @ ಚಕ್ರಿ @ ಚಂದು ಬಿನ್ ಬಸವನಾಯ್ಕ, (29 ), ಕುಂಬ್ರಹಳ್ಳಿ ಗ್ರಾಮ, ಹೆಮ್ಮರಗಾಲ ಪೋಸ್ಟ್, ಕೌಲಂದೆ ಹೋಬಳೀ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ, ಹಾಲಿ ವಾಸ ನಾಯಂಡಹಳ್ಳಿ, ವಿನಾಯಕ ಲೇಔಟ್, ವಿನಾಯಕ ಬೇಕರಿ ಹತ್ತಿರ, ಬೆಂಗಳೂರುನಗರ, ಇವರನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಲಾಗಿ ಈ ಆರೋಪಿಗಳು ಇನ್ನಿಬ್ಬರು  ಆರೋಪಿಗಳೊಂದಿಗೆ ಸೇರಿ ಮೈಸೂರು ನಗರ ಸೇರಿದಂತೆ, ಮಂಡ್ಯ ಜಿಲ್ಲೆ, ರಾಮನಗರ, ಚಾಮರಾಜನಗರ, ಸಂತೆಮರಳ್ಳಿ, ಗದಗ್ ಇತ್ಯಾದಿ ಸ್ಥಳಗಳಲ್ಲಿ ರೋಲಿಂಗ್ ಶೆಟರ್‍ಗಳನ್ನು ಮೀಟಿ ಕಳವು ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿ, ಆರೋಪಿಗಳು ನೀಡಿದ ವರ್ತಮಾನದ ಮೇರೆಗೆ ಮೈಸೂರು ನಗರ ವ್ಯಾಪ್ತಿಯ 6 ಪ್ರಕರಣಗಳು ಸೇರಿದಂತೆ  ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ 4 ಪ್ರಕರಣಗಳು, ಗದಗ್ ಜಿಲ್ಲಾ ವ್ಯಾಪ್ತಿಯ 3 ಪ್ರಕರಣಗಳು, ಮಂಡ್ಯ 2 ಪ್ರಕರಣ, ರಾಮನಗರದ 2 ಪ್ರಕರಣ, ಸೇರಿದಂತೆ  ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ.   ಕಳ್ಳತನ ಮಾಡಿದ್ದ ಹಣವನ್ನು ಆರೋಪಿಗಳು ಖರ್ಚು ಮಾಡಿದ್ದಾರೆ.

ತನಿಖಾ ವೇಳೆಯಲ್ಲಿ ಆರೋಪಿಗಳು  ಕೃತ್ಯವೆಸಗಲು ಉಪಯೋಗಿಸುತ್ತಿದ್ದ ಒಂದು ಮಹೀಂದ್ರ ವೆರಿಟೋ ಕಾರು, ಹಾಗೂ ಆರೋಪಿಗಳು ಕಳವು ಮಾಡಿದ್ದ ಹಣದಿಂದ ಖರೀದಿಸಿದ್ದ ಒಂದು ಎಲ್.ಇ.ಡಿ ಟಿ.ವಿ ಹಾಗೂ ಕೃತ್ಯ ನಡೆದ ಸ್ಥಳದಿಂದ ಸಾಕ್ಷ್ಯ ನಾಶಪಡಿಸಲು ತೆಗೆದುಕೊಂಡು ಹೋಗಿದ್ದ ಒಂದು ಡಿ.ವಿ.ಆರ್. ಅನ್ನು ವಶಪಡಿಸಿಕೊಂಡಿದ್ದಾರೆ.

ಪತ್ತೆ ಕಾರ್ಯವನ್ನು ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ.ಯ ಎ.ಸಿ.ಪಿ. ಬಿ.ಆರ್. ಲಿಂಗಪ್ಪರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಪಿ.ಐ. .ಜಗದೀಶ್ , ಎ.ಎಸ್.ಐ.ಗಳಾದ ಚಂದ್ರೇಗೌಡ, ಅಲೆಕ್ಸಾಂಡರ್ ಸಿಬ್ಬಂದಿಗಳಾದ   ಎಂ.ಆರ್.ಗಣೇಶ್, ಯಾಕುಬ್ ಷರೀಫ್, ಲಕ್ಷ್ಮೀಕಾಂತ್, ಚಿಕ್ಕಣ್ಣ, ರಾಮಸ್ವಾಮಿ, ಶಿವರಾಜು, ಆನಂದ್, ನಿರಂಜನ, ಪ್ರಕಾಶ್, ರಾಜೇಂದ್ರ, ಅನಿಲ್, ಶ್ಯಾಮ್ ಸುಂದರ್, ಗುರುದೇವಾರಾದ್ಯ, ಮಂಜು, ಗೌತಮ್ ಮತ್ತು ಶಿವಕುಮಾರ್  ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: