ದೇಶ

ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ವಾಯುಪಡೆ ಉಪಮುಖ್ಯಸ್ಥ

ನವದೆಹಲಿ,ಸೆ.27-ಭಾರತೀಯ ವಾಯುಪಡೆಯ ಉಪಮುಖ್ಯಸ್ಥರೊಬ್ಬರು ಆಕಸ್ಮಿಕವಾಗಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆಸ್ಪತ್ರೆ ಸೇರಿದ್ದಾರೆ.

ಉಪ ಮುಖ್ಯಸ್ಥ ಏರ್ ಮಾರ್ಷಲ್ ಶಿರೀನ್ ಬಬನ್ ದೇವೊ ಆಕಸ್ಮಿಕವಾಗಿ ತೊಡೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಇವರನ್ನು ತಕ್ಷಣ ದಿಲ್ಲಿಯ ಆರ್ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರ ಎಲುಬು ಮೂಳೆಯನ್ನು ಸರಿಪಡಿಸಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಏರ್ ಮಾರ್ಷಲ್ ದೇವೊ ಜುಲೈನಲ್ಲಿ ಏರ್ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. 1979 ಜೂ.15 ರಂದು ವಾಯುಪಡೆಯ ಫೈಟರ್ ಪೈಲಟ್ ಆಗಿ ನಿಯೋಜನೆಗೊಂಡಿದ್ದ ಎಸ್ಬಿ ದೇವೊ ರಾಷ್ಟ್ರೀಯ ರಕ್ಷಣಾ ಅಕಾಡಮಿ ಹಾಗೂ ವಾಷಿಂಗ್ಟನ್ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: