ಮೈಸೂರು

ಮಗುವಿನ ಶವವಿರಿಸಿ ಪ್ರತಿಭಟನೆ

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಸ್ಮಶಾನ ಜಾಗ ನಿಗದಿಪಡಿಸುವಂತೆ ಒತ್ತಾಯಿಸಿ ಮಗುವಿನ ಮೃತದೇಹವನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ನಿರತರಾಗಿರುವ ನಂಜನಗೂಡು ತಾಲೂಕಿನ ಅಹಲ್ಯ ನಗರದಲ್ಲಿನ ನಿವಾಸಿಗಳು, ಇಲ್ಲಿ ಸತ್ತರೆ ಹೂಳಲು ಜಾಗವಿಲ್ಲ. ಇದರಿಂದ ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ. ನಮಗೆ ಸ್ಮಶಾನಕ್ಕೆ ಜಾಗ ಒದಗಿಸಿಕೊಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಇಲ್ಲಿನ ಮಂಜುನಾಥ್ ಎಂಬುವರ ಎರಡು ವರ್ಷದ ಮಗು ಕೈಲಾಸ್ ಕುಮಾರ್ ಅನಾರೋಗ್ಯದಿಂದ ಮೃತಪಟ್ಟಿತ್ತು. ತಮಗೆ ಮಗುವನ್ನು ಮಣ್ಣು ಮಾಡುವುದಕ್ಕೂ ಇಲ್ಲಿ ಜಾಗವಿಲ್ಲ. ತಹಶೀಲ್ದಾರ್ ಸ್ಥಳಕ್ಕೆ ಬರುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ. ನಮಗೆ ಸ್ಮಶಾನಕ್ಕೆ ಜಾಗ ಒದಗಿಸಿಕೊಡಿ ಎಂದು ಹೇಳಿದರು.

Leave a Reply

comments

Related Articles

error: