ಮೈಸೂರು

ಅಟಲ್ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ

ಮೈಸೂರಿನ ವಿವೇಕಾನಂದ ವೃತ್ತದ ಗೌರಿಶಂಕರ ಸಮುದಾಯ ಭವನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ರಕ್ತದಾನ ಶಿಬಿರದಲ್ಲಿ ಹಲವರು ಪಾಲ್ಗೊಂಡು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಈ ಸಂದರ್ಭ ಸ್ಥಳಕ್ಕೆ ತೆರಳಿದ ಮಾಜಿ ಸಚಿವ ಎಸ್.ಎ.ರಾಮದಾಸ್ ರಕ್ತದಾನಿಗಳಿಗೆ ಹಣ್ಣುಗಳನ್ನು ವಿತರಿಸಿದರು.

ಕೃಷ್ಣರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಜೈಶಂಕರ್, ಕಾರ್ಯದರ್ಶಿಗಳಾದ ಗೌತಮ್, ದೀಪು, ಉಲ್ಲಾಸ್, ಹರೀಶ್, ರಾಜೇಶ್, ತೇಜಸ್, ಮಹದೇವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: