ಮೈಸೂರು

ಡಾ.ಹೆಚ್.ಎನ್.ವಿಶ್ವನಾಥ್‍ಗೆ ರಾಜ್ಯ ಮಟ್ಟದ ‘ಗುರು ಚೇತನ’ ಪ್ರಶಸ್ತಿ

ಮೈಸೂರು, ಸೆ.27:- ನಗರದ ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಹೆಚ್.ಎನ್.ವಿಶ್ವನಾಥ್‍ ಅವರಿಗೆ ಇದೇ ಮೊಟ್ಟ ಮೊದಲ ಬಾರಿಗೆ ಕೊಡುತ್ತಿರುವ ದಾವಣಗೆರೆಯ ಶಿಕ್ಷಣ ತಜ್ಞ ಡಾ.ಹೆಚ್.ವಿ.ವಾಸುದೇವಪ್ಪ ಚಾರಿಟಬಲ್ ಮತ್ತು  ಎಜುಕೇಶನ್ ಟ್ರಸ್ಟ್ ವತಿಯಿಂದ ರಾಜ್ಯ ಮಟ್ಟದ ‘ಗುರುಚೇತನ ಪ್ರಶಸ್ತಿ’ಯನ್ನು ಸೆ.29ರಂದು ಶನಿವಾರ ಮಾಗನೂರು ಬಸಪ್ಪ ಸಭಾ ಭವನ (ಈಶ್ವರ ದೇವಸ್ಥಾನದ ಎದುರು), ತರಳಬಾಳು ಬಡಾವಣೆ, ದಾವಣಗೆರೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರದಾನ ಮಾಡಲಾಗುತ್ತಿದೆ.

ಈಗಾಗಲೇ ಇವರು 24 ಸುದೀರ್ಘ ವರ್ಷಗಳ ಶಿಕ್ಷಣದ ಅನುಭವವನ್ನು ಹೊಂದಿದ್ದು, ಶೈಕ್ಷಣಿಕ ಬೋಧನಾ ತಂತ್ರಜ್ಞಾನದಲ್ಲಿ ಪಿಹೆಚ್‍ಡಿ ಸಂಶೋಧನೆಯನ್ನು ಪಡೆದಿರುತ್ತಾರೆ. ಮೈಸೂರು, ಬೆಂಗಳೂರು, ತುಮಕೂರು ಹಾಗೂ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯ, ಮೈಸೂರು ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಸಾಕ್ಷರತಾ ಕಾರ್ಯಕ್ರಮಗಳಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ರಾಷ್ಟ್ರೀಯ ಪ್ರತಿಭಾನ್ವೇಷಣೆ ಮೌಲ್ಯಮಾಪನ ಸಮಿತಿಯ ಸದಸ್ಯರಾಗಿ, ಮೈಸೂರು ವಿ.ವಿ. ಬಿ.ಎಡ್. ಕಾಲೇಜುಗಳ ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಇದೇ ಮೊಟ್ಟ ಮೊದಲ ಬಾರಿಗೆ ಕೊಡುತ್ತಿರುವ ‘ಗುರು ಚೇತನ’ ಪ್ರಶಸ್ತಿಗೆ ಭಾಜನರಾಗಿರುವ ಡಾ.ಹೆಚ್.ಎನ್.ವಿಶ್ವನಾಥ್‍ರವರು 10,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಅಂದು ಸ್ವೀಕರಿಸಲಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: