ಮೈಸೂರು

ಉತ್ತರ ಕಾಂಡ ಕಾದಂಬರಿ ಕುರಿತು ಸೆ.30ರಂದು ವಿಚಾರ ಸಂಕಿರಣ – ಸಂವಾದ

ಡಾ.ಎಸ್.ಎಲ್.ಭೈರಪ್ಪ ಉಪಸ್ಥಿತಿ

ಮೈಸೂರು,ಸೆ.27 : ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ಡಾ.ಎಸ್.ಎಲ್.ಭೈರಪ್ಪನವರ ‘ಉತ್ತರ ಕಾಂಡ’ ಕಾದಂಬರಿ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.

ವೇದಿಕೆ ಅಧ್ಯಕ್ಷ ಗ.ನಾ.ಭಟ್ಟ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸೆ.30ರ ಬೆಳಗ್ಗೆ 10 ಗಂಟೆಗೆ ಕೃಷ್ಣಮೂರ್ತಿ ಪುರಂನ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಬೆಂಗಳೂರಿನ ಕುವೆಂಪು ಭಾಷಾ ಭಾರತೀಯದ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರುದತ್ ಉದ್ಘಾಟಿಸಲಿದ್ದಾರೆ. ಸರಸ್ವತಿ ಸನ್ಮಾನ್ ಪುರಸ್ಕೃತ ಹಾಗೂ ಕಾದಂಬರಿ ಕರ್ತೃ ಡಾ.ಎಸ್.ಎಲ್.ಭೈರಪ್ಪ ಹಾಜರಿರಲಿದ್ದಾರೆ.

ಕಾದಂಬರಿಯ ‘ಸೀತೆಯ ಮನೋಮಂಥನ ಕುರಿತು ಅಂಕಣಗಾರ್ತಿ ಸಹನಾ ವಿಜಯಕುಮಾರ್, ‘ಭೈರಪ್ಪ ಚಿತ್ರಿತ ರಾಮ’ ಬಗ್ಗೆ ಸ್ವಯಂ ತಾವು, ‘ಭೈರಪ್ಪನವರ ಸೃಷ್ಟಿಶೀಲತೆಯಲ್ಲಿ ಲಕ್ಷ್ಮಣ, ಊರ್ಮಿಳೆ, ತಾರೆ ಮೊದಲಾದವರು ಬಗ್ಗೆ ವಿಮರ್ಶಕಿ ಆಶಾ ರಘು ಹಾಗೂ ‘ಉತ್ತರ ಕಾಂಡ’ದಲ್ಲಿ ಮನುಷ್ಯ ನಿಸರ್ಗ ಸಂಬಂಧ ಕುರಿತು ಮಾತನಾಡಿಲಿದ್ದಾರೆ ಎಂದರು.

ನಂತರ ಸಭಿಕರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿದ್ದು, ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಎಸ್.ಎಲ್.ಕೃಷ್ಣಪ್ರಸಾದ್, ಗೀತಾ ಎಂ.ಹೆಗ್ಡೆ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: