ಮೈಸೂರು

ವೆಚ್ಚ ಭರಿಸಲಾಗದ ಕುಟುಂಬಕ್ಕೆ ಸಹಾಯ ಹಸ್ತ

ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ವ್ಯಕ್ತಿಯೋರ್ವ ತನ್ನ ಮಗಳ ಕತ್ತು ಹಿಸುಕಲು ಹೋಗಿ, ಅವಳನ್ನು ನೂಕಿ ಕೊನೆಗೆ ತಾನೇ ಮಾರ್ಬಲ್ ಕಟ್ಟಿಂಗ್ ಮೆಷಿನ್ ನಲ್ಲಿ ಕತ್ತು ಕುಯ್ದು ಆತ್ಮಹತ್ಯೆಗೆ ಶರಣಾದ ಘಟನೆ ಭಾನುವಾರ ತೊಣಚಿಕೊಪ್ಪಲಿನಲ್ಲಿ ನಡೆದಿತ್ತು. ಅಪ್ಪನ ಕೃತ್ಯಕ್ಕೆ ಮಗಳು ಆಸ್ಪತ್ರೆಯ ಪಾಲಾಗಿದ್ದಳು. ಆಸ್ಪತ್ರೆಯ ವೆಚ್ಚ ಭರಿಸಲಾಗದ ದಯನೀಯ ಸ್ಥಿತಿಯಲ್ಲಿದ್ದಾಗ ವ್ಯಕ್ತಿಯೋರ್ವರು ಮಾನವೀಯತೆ ಮೆರೆದಿದ್ದಾರೆ.

ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಜವರೇಗೌಡನ ಮಗಳಿಗೆ ತಂದೆ ನೂಕಿದ ಪರಿಣಾಮ ತಲೆಗೆ ಏಟಾಗಿತ್ತು. ಇದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಆಸ್ಪತ್ರೆಯ ಬಿಲ್ ಭರಿಸಲು ಸಾಧ್ಯವಾಗದ ಸಮಯದಲ್ಲಿ ತೊಣಚಿಕೊಪ್ಪಲು ನಿವಾಸಿ, ಲಂಡನ್ ನಿಂದ ಮರಳಿದ ಮಲ್ಲಿಕ್ ಉಮಾಪತಿ ಅವರು 40 ಸಾವಿರ ರೂ.ಗಳನ್ನು ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.

ಈ ಕುರಿತು ಮಾತನಾಡಿದ ಮಲ್ಲಿಕ್, ಉಮಾಪತಿ ಇನ್ನೆರಡು ದಿನಗಳಲ್ಲಿ ನನ್ನ ಮಗನ ಜನ್ಮ ದಿನವನ್ನು ಆಚರಿಸಬೇಕಿತ್ತು. ಆದರೆ ಜನ್ಮದಿನಕ್ಕಾಗಿ ಹೆಚ್ಚಿನ ಹಣವನ್ನು ವ್ಯಯಿಸದೇ ಈ ಮಗುವಿನ ಖರ್ಚಿಗಾಗಿ ನೀಡುತ್ತಿದ್ದೇನೆ. ದೇವರು ನನಗೆ ಸಹಾಯ ಮಾಡುವ ಅವಕಾಶ ಕಲ್ಪಿಸಿದ್ದಾನೆ. ಅವಳ ಶಿಕ್ಷಣಕ್ಕೂ ವೆಚ್ಚ ಭರಿಸುವುದಾಗಿ ತಿಳಿಸಿದರು.

ಈ ಸಂದರ್ಭ ಅವರ ಧರ್ಮಪತ್ನಿ ಅರ್ಚನಾ ಜೊತೆಗಿದ್ದರು.

Leave a Reply

comments

Related Articles

error: