ಸುದ್ದಿ ಸಂಕ್ಷಿಪ್ತ

ಸಸ್ಯಶಾಸ್ತ್ರ ವಿಭಾಗದ ಶೈಕ್ಷಣಿಕೆ ಚಟುವಟಿಕೆಗಳ ಉದ್ಘಾಟನೆ ನಾಳೆ

ಮೈಸೂರು,ಸೆ.27 : ಮೈಸೂರು ವಿವಿಯ ಸಸ್ಯಶಾಸ್ತ್ರ ಸಮಾಜ ವತಿಯಿಂದ ಶೈಕ್ಷಣಿಕ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಾಳೆ (28)ರ ಬೆಳಗ್ಗೆ 11.30ಕ್ಕೆ ವಿಭಾಗದ ಲಿನಿಯ್ಸೊ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಮುಖ್ಯ ಅತಿಥಿಯಾಗಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಂಜುನಾಥ್ ಕೆ.ನಾಯ್ಕ್ ಹಾಜರಿರಲಿದ್ದಾರೆ. ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಲೀಲಾವತಿ ಅಧ್ಯಕ್ಷತೆ. ಸಮಾಜದ ಕಾರ್ಯದರ್ಶಿ ಡಾ.ರಾಜಕುಮಾರ್ ಹೆಚ್. ಗ್ರಾಂಪಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

 

Leave a Reply

comments

Related Articles

error: