ಸುದ್ದಿ ಸಂಕ್ಷಿಪ್ತ

ಸೆ.29ರಂದು ಕೃತಿ ಬಿಡುಗಡೆ

ಮೈಸೂರು,ಸೆ.27 :  ಮೈವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ‍್ಯಾಪಕ ಡಾ.ಹೆಚ್.ಎಂ.ರಾಜಶೇಖರ್ ಅವರ ರಚಿಸಿರುವ ‘ವರ್ಕಿಂಗ್ ಆಫ್ ದಿ ಇಂಡಿಯನ್ ಕಾನ್ಸ್ ಸ್ಟಿಟ್ಯೂಷನ್’ ಎಂಬ ಕೃತಿ ಬಿಡುಗಡೆ ಸಮಾರಂಭವನ್ನು ಸಾಹಿತ್ಯ ಸಂಸ್ಕೃತಿ ಶಿಕ್ಷಣಕ್ಕೆ ಮೀಸಲಾದ ‘ಜ್ಞಾನಬುತ್ತಿ’ ವತಿಯಿಂದ ಸೆ.29ರ ಸಂಜೆ 6 ಗಂಟೆಗೆ ಲಕ್ಷ್ಮೀಪುರಂನ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕೃತಿ ಬಿಡುಗಡೆಗೊಳಿಸುವರು, ಕೃತಿ ಕುರಿತು ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಕೆ.ಎನ್.ರಾಜಾ. ವಿಶ‍್ವ ಪ್ರಜ್ಞ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ.ಎನ್.ಶಂಕರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: