ಕ್ರೀಡೆ

ದಿಢೀರ್ ನಿವೃತ್ತಿ ಘೋಷಿಸಿದ ಜೊನಾಥ್ ಟ್ರಾಟ್

ಲಂಡನ್,ಸೆ.27-ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜೊನಾಥ್ ಟ್ರಾಟ್ ಎಲ್ಲ ಮಾದರಿಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ನಂ.3ನೇ ಕ್ರಮಾಂಕದಲ್ಲಿ ಮಿಂಚಿದ್ದ ಜೊನಾಥ್ ಟ್ರಾಟ್ 2015ರಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡಿಸ್ ವಿರುದ್ಧ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು. ಆ ಬಳಿಕ ವರ್ ವಿಕ್ ಶೈರ್ ಪರ ಕೌಂಟಿ ಕ್ರಿಕೆಟ್ ಮುಂದುವರೆಸಿದ್ದರು

2009ರಿಂದ 2012ರವರೆಗೆ ಇಂಗ್ಲೆಂಡ್ ತಂಡ ಮೂರು ಆಯಷಸ್ ಸರಣಿ ಗೆಲುವಿನಲ್ಲಿ ಟ್ರಾಟ್ ಪ್ರಮುಖ ಪಾತ್ರವಹಿಸಿದ್ದರು. ದಕ್ಷಿಣ ಆಫ್ರಿಕಾ ಮೂಲದ ಟ್ರಾಟ್ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಆರು ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಅಲ್ಲದೇ 2011ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ.

ಟ್ರಾಟ್ ಇಂಗ್ಲೆಂಡ್ ಪರ 52 ಟೆಸ್ಟ್ ಪಂದ್ಯಗಳನ್ನಾಡಿ 45 ಸರಾಸರಿಯಲ್ಲಿ 3,835 ರನ್ ಬಾರಿಸಿದ್ದಾರೆ. ಇದರಲ್ಲಿ 9 ಶತಕ ಹಾಗೂ 19 ಅರ್ಧಶತಕ ಸಿಡಿಸಿದ್ದಾರೆ. ಇನ್ನು 68 ಏಕದಿನ ಪಂದ್ಯಗಳಲ್ಲಿ 51ರ ಸರಾಸರಿಯಲ್ಲಿ 4 ಶತಕ ಹಾಗೂ 22 ಅರ್ಧಶತಕಗಳ ನೆರವಿನಿಂದ 2,819 ರನ್ ಬಾರಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್ ನಲ್ಲಿ 7 ಪಂದ್ಯಗಳನ್ನಾಡಿದ್ದರು. (ಎಂ.ಎನ್)

Leave a Reply

comments

Related Articles

error: