ಸುದ್ದಿ ಸಂಕ್ಷಿಪ್ತ
‘ಸಹಕಾರ’ ಚರ್ಚಾ ಸ್ಪರ್ಧೆ ಸಮಾರೋಪ : ಬಹುಮಾನ ವಿತರಣೆ ನಾಳೆ
ಮೈಸೂರು,ಸೆ.27 : ಮೈವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಸ್ನಾತಕಪೂರ್ವ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ‘ಸಹಕಾರ’ ಕುರಿತ ಕನ್ನಡ ಚರ್ಚಾ ಸ್ಪರ್ದೆಯ ಸಮಾರೋಪ ಸಮಾರಂಭವನ್ನು ನಾಳೆ (28)ರ ಮಧ್ಯಾಹ್ನ 3.30ಕ್ಕೆ ಮಾನಸಗಂಗೋತ್ರಿಯ ಐನ್ ಸ್ಟೀನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ವಿಕ್ಷೇನಿ ನಿರ್ದೇಶಕ ಡಾ.ಕೆ.ಬಿ.ಪ್ರವೀಣ ಅಧ್ಯಕ್ಷತೆ, ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಮಹೇಂದ್ರ ಕುಮಾರ್ ಬಹುಮಾನ ವಿತರಿಸಲಿದ್ದಾರೆ. ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ವಿ.ಗೋಪಾಲಪ್ಪ, ಡಾ.ಬಿ.ಎಸ್.ಚಂದ್ರಶೇಖರ್ ಹಾಗೂ ಇತರರು ಉಪಸ್ಥಿತರಿರಲಿದ್ದಾರೆ. (ಕೆ.ಎಂ.ಆರ್)