
ವಿಶ್ವ ವಿಖ್ಯಾತ ಪಾಪ್ ಗಾಯಕ ಬ್ರಿಟನ್ನ ಜಾರ್ಜ್ ಮೈಕಲ್(53) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಫ್ ಯು ವೇರ್ ದೇರ್ ಮತ್ತು ಎವರಿಥಿಂಗ್ ಶೀ ವಾಂಟ್ಸ್ ಇತ್ಯಾದಿ ಸೂಪರ್ ಹಿಟ್ ಹಾಡುಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಜಾರ್ಜ್ ಮೈಕಲ್ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ವ್ಯವಸ್ಥಾಪಕ ಮೈಕಲ್ ಲಿಪ್ ಮ್ಯಾನ್ ಪ್ರಕಟಿಸಿದ್ದಾರೆ.
ವ್ಹಾಮ್ ಹಾಡಿನ ಮೂಲಕ ಜಗದ್ವಿಖ್ಯಾತರಾದ ಜಾರ್ಜ್ ಮೈಕಲ್ ಅತ್ಯಂತ ಸ್ಫುರದ್ರೂಪ ಮತ್ತು ತಮ್ಮ ವಿಶಿಷ್ಟ ಗಾಯನ ಮೋಡಿಯಿಂದ 80ರ ದಶಕದಲ್ಲಿ ಪಾಪ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಎಂಟಿವಿ ವಿಡಿಯೋ ಮ್ಯೂಸಿಕ್ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರ ಗೌರವಗಳಿಗೂ ಇವರು ಪಾತ್ರರಾಗಿದ್ದರು.