ಪ್ರಮುಖ ಸುದ್ದಿ

ನಟಿ ತನುಶ್ರೀದತ್ತಾ ಆರೋಪ ಆಧಾರ ರಹಿತವಾದದ್ದು : ನಟ ನಾನಾ ಪಾಟೇಕರ್

ದೇಶ(ನವದೆಹಲಿ)ಸೆ.28:- ಬಾಲಿವುಡ್ ನಟಿ ತನುಶ್ರೀ ದತ್ತಾ ಬಾಲಿವುಡ್ ನ ಖ್ಯಾತ ನಟ ನಾನಾ ಪಾಟೇಕರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಈ ಆರೋಪವನ್ನು ತಳ್ಳಿ ಹಾಕಿರುವ ನಾನಾಪಾಟೇಕರ್ ಆರೋಪ ಆಧಾರ ರಹಿತವಾದದ್ದು ಎಂದಿದ್ದಾರೆ.

ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಕುರಿತು ಚಿಂತನೆ ನಡೆಸಿದ್ದೇನೆ ಎಂದಿದ್ದಾರೆ.  ನಿಮ್ಮ ಅರ್ಥದಲ್ಲಿ ಲೈಂಗಿಕ ಕಿರುಕುಳವೆಂದರೇನು? ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಜೊತೆ 50ರಿಂದ 100ಜನರಿದ್ದರು. ಈ ಕುರಿತು ಯಾವರೀತಿಯ ಕಾನೂನು ಕ್ರಮ ಕೈಗೊಳ್ಳಬಹುದೆಂದು ನೋಡುತ್ತೇನೆ. ಜನರು ಏನು ಬೇಕಾದರೂ ಹೇಳುತ್ತಾರೆ. ಆದರೆ ನಾನು ನನ್ನ ಕೆಲಸವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ. ತನುಶ್ರೀ ದತ್ತಾ  ಚಾರಿಟಿ ಕೆಲಸದ ಕುರಿತೂ ಬೆರಳು ತೋರಿದ್ದರು. ಅವಳ ಕೆಟ್ಟ ನಡವಳಿಕೆಯನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. (ಎಸ್.ಎಚ್)

Leave a Reply

comments

Related Articles

error: