ಮೈಸೂರು

ಫೇಸ್ ಬುಕ್ ನಲ್ಲಿ ಪರಿಚಯವಾದ ಯೋಧನಿಂದ ಯುವತಿಗೆ ಮೋಸ : ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರಿದ ಯುವತಿ

ಮೈಸೂರು,ಸೆ.28:- ಫೇಸ್ ಬುಕ್ ನಲ್ಲಿ ಪರಿಚಯವಾದ ಯೋಧನೋರ್ವ ವಿವಾಹವಾಗುವುದಾಗಿ ನಂಬಿಸಿ ಯುವತಿಯೋರ್ವಳಿಗೆ ಕೈಕೊಟ್ಟಿದ್ದು, ಯುವತಿ ಠಾಣೆಯ ಮೆಟ್ಟಿಲೇರಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಇಲವಾಲ ಹೋಬಳಿಯ ನಿವಾಸಿ ರಂಜಿತ್ ಎಂಬಾತ ಕಾಶ್ಮೀರದ ಗಡಿಯಲ್ಲಿ ದೇಶಕಾಯುವ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,ಈತನಿಗೆ ಬಟ್ಟೆ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನತಾನಗರ ನಿವಾಸಿ ಅಂಬಿಕಾ ಎಂಬವಳ ಪರಿಚಯ ಫೇಸ್ ಬುಕ್ ಮೂಲಕ ಆಗಿತ್ತು. ಫೇಸ್ ಬುಕ್ ಮೂಲಕ ಸಾಕಷ್ಟು ಸಲುಗೆಯನ್ನು ಬೆಳೆಸಿಕೊಂಡಿದ್ದರು.  ಈತ ಸೆ.5ರಂದು ರಜೆಗೆ ಊರಿಗೆ ಬಂದಿದ್ದು, ಆಕೆಯನ್ನು ಸುತ್ತಾಡಿಸಿದ್ದಾನೆ. ಅಷ್ಟೇ ಅಲ್ಲದೇ ಹೋಟೆಲ್ ನಲ್ಲಿ ರೂಮು ಮಾಡಿ ಇರಿಸಿಕೊಂಡಿದ್ದ. ಹುಟ್ಟು ಹಬ್ಬದ ಪಾರ್ಟಿಯನ್ನು ಭರ್ಜರಿಯಾಗಿಯೇ ಆಚರಿಸಿಕೊಂಡಿದ್ದ ಎನ್ನಲಾಗಿದೆ. ಯುವತಿ ಯೋಧನಲ್ಲಿ ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ಯೋಧ ವಿವಾಹಕ್ಕೆ ನಿರಾಕರಿಸಿದ್ದಾನೆ ಎನ್ನಲಾಗಿದೆ. ಯುವತಿ ಇದೀಗ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾಳೆ. ತನ್ನನ್ನು ಬಳಸಿಕೊಂಡು ವಿವಾಹವಾಗಲು ಹೇಳಿದರೆ ನಿರಾಕರಿಸಿದ್ದಾನೆಂದು ಯೋಧನ ವಿರುದ್ಧ ದೂರು ದಾಖಲಿಸಿದ್ದಾಳೆ. ಯೋಧ ಅಕ್ಟೋಬರ್ 5ಕ್ಕೆ ಮತ್ತೆ ಕರ್ತವ್ಯಕ್ಕೆ ವಾಪಸ್ಸಾಗಲಿದ್ದು, ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ. ಯುವತಿಗೆ ಆದ ಅನ್ಯಾಯವನ್ನು  ಸರಿಪಡಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: