ದೇಶ

ಅಗ್ನಿ-5 ಖಂಡಾಂತರ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆ ಯಶಸ್ವಿ

ನವದೆಹಲಿ: 5000 ಕಿಮೀ ಕಾರ್ಯಾಚರಣಾ ಸಾಮರ್ಥ್ಯದ ಅಗ್ನಿ-5 ಖಂಡಾಂತರ ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆಯನ್ನು ಸೋಮವಾರದಂದು ನಡೆಸಲಾಗಿದ್ದು, ಯಶಸ್ವಿಯಾಗಿದೆ.

ಒಡಿಶಾದ ಸೇನೆಗೆ ಸೇರಿದ ವೀಲರ್ ದ್ವೀಪದಲ್ಲಿ ಈ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ. ಪ್ರಮುಖ ಉತ್ಪಾದನಾ ಕೇಂದ್ರಗಳಿರುವ ಈಶಾನ್ಯ ಭಾಗದ ಯಾವುದೇ ಗುರಿಗಳನ್ನು ತಲುಪಬಲ್ಲ ಸಾಮರ್ಥ್ಯವಿರುವ ಅಗ್ನಿ-5 ಕ್ಷಿಪಣಿಯನ್ನು ಮೊಬೈಲ್ ಉಡಾಹಕದಿಂದ ಉಡಾಯಿಸಬಹುದಾಗಿದೆ.

ಭಾರತದ ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಈ ಅಣ್ವಸ್ತ್ರವನ್ನು ಸಿದ್ಧಪಡಿಸಿದ್ದು, ಪಾಕಿಸ್ತಾನದ ಬಹುತೇಕ ಪ್ರದೇಶಗಳು ಮತ್ತು ಚೀನಾದ ಯಾವುದೇ ಭಾಗ ಮತ್ತು ಪಶ್ಚಿಮದಲ್ಲಿ ಯುರೋಪ್‍ನ ಕೊನೆಯ ಅಂಚಿನವರೆಗೆ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಅಗ್ನಿ-5 ಮೂರು ಸ್ತರ ಕ್ಷಿಪಣಿಯಾಗಿದ್ದು, 17 ಮೀ ಉದ್ದ ಮತ್ತು 15 ಟನ್ ಭಾರ ಹೊಂದಿದೆ. ಸುಮಾರು 80 ಕಿಮೀ ಎತ್ತರಕ್ಕೆ ಕ್ಷಿಪಣಿ ತಲುಪುತ್ತದೆ. ಸುಮಾರು 1 ಸಾವಿರ ಕೆಜಿ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ. ಮುಂದಿನ ವರ್ಷದೊಳಗೆ ಈ ಕ್ಷಿಪಣಿಯು ಭಾರತೀಯ ಸೇನೆಯನ್ನು ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ.

Leave a Reply

comments

Related Articles

error: