ಮೈಸೂರು

ಭಾರತ್ ಹಾಸ್ಪಿಟಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ಎನ್ಎಬಿಎಚ್ ಮಾನ್ಯತೆ

ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿರುವ ಮೈಸೂರು ಭಾರತ್ ಹಾಸ್ಪಿಟಲ್ ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಹೆಲ್ತ್’ಕೇರ್ ಪ್ರೊವೈಡರ್ಸ್(ಎನ್‍ಎಬಿಎಚ್)ನ ಮಾನ್ಯತೆ ಪಡೆದಿದ್ದು ಮೈಸೂರಿನ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೆಲ್ತ್’ಕೇರ್‍ ಗ್ಲೋಬಲ್ ಎಂಟರ್ ಪ್ರೈಸಸ್‍ನ ಅಧ್ಯಕ್ಷ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಎಸ್. ಅಜಯ್‍ಕುಮಾರ್ ತಿಳಿಸಿದರು.

ಸೋಮವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೈಸೂರು ಮತ್ತು ನಗರದ ಸುತ್ತಮುತ್ತಲಿನ ಕ್ಯಾನ್ಸರ್ ಪೀಡಿತರಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 1989 ರಲ್ಲಿ ಡಾ.ಅಜಯ್‍ಕುಮಾರ್ ಅವರು ಭಾರತ್ ಹಾಸ್ಪಿಟಲ್ ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿಯನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಬೆಳೆಯುತ್ತಾ ಬಂದಿರುವ ಆಸ್ಪತ್ರೆ ಈಗ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಚಿಕಿತ್ಸಾಕೇಂದ್ರವಾಗಿ ರೂಪುಗೊಂಡಿದೆ. ಒಂದೇ ಸೂರಿನಡಿಯಲ್ಲಿ ಎಲ್ಲ ಬಗೆಯ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇಂದು ಬಿಎಚ್‍ಐಒ ಮತ್ತು ಎಚ್‍ಸಿಜಿ ಕುಟುಂಬಕ್ಕೆ ಒಂದು ಪ್ರಮುಖ ಮೈಲುಗಲ್ಲು ಸ್ಥಾಪಿಸಿದ ದಿನವಾಗಿದೆ. ನಮ್ಮ ರೋಗಿಗಳಿಗೆ ನಾವು ಸದಾ ಅತ್ಯುತ್ತಮ ಗುಣಮಟ್ಟದ ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿರುವುದನ್ನು ಗಮನಿಸಿ ಎನ್‍ಎಬಿಎಚ್ ಈ ಮಾನ್ಯತೆ ನೀಡಿರುವುದು ದೊಡ್ಡ ಹೆಮ್ಮೆ. ಎನ್‍ಎಬಿಎಚ್ ಮಾನ್ಯತೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ವರ್ಗದವರಿಗೂ ಕ್ಯಾನ್ಸರ್ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ನಮ್ಮ ಬದ್ಧತೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ಕ್ಯಾನ್ಸರ್ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಅವರನ್ನುಆರೈಕೆ ಮಾಡುತ್ತಿರುವುದನ್ನು ಗಮನಿಸಿದ ರಾಜ್ಯ ಸರ್ಕಾರ 2013-14ನೇ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯನ್ನು ಭಾರತ್ ಹಾಸ್ಪಿಟಲ್  ಇನ್‍ಸ್ಟಿಟ್ಯೂಟ್ ಆಫ್‍ಆಂಕಾಲಜಿಗೆ ನೀಡಿ ಗೌರವಿಸಿತ್ತು. ಈ ಆಸ್ಪತ್ರೆ ಮೈಸೂರು ಭಾಗದಲ್ಲಿ ಅತ್ಯಂತ ಹಳೆಯದಾದ ಕ್ಯಾನ್ಸರ್ ಆಸ್ಪತ್ರೆ ಎನಿಸಿದೆ. ಇಲ್ಲಿ ರೇಡಿಯೇಶನ್ ಆಂಕಾಲಜಿ, ಸರ್ಜಿಕಲ್‍ ಆಂಕಾಲಜಿ, ಮೆಡಿಕಲ್ ಆಂಕಾಲಜಿ, ಕ್ಲಿನಿಕಲ್ ಲ್ಯಾಬೋರೇಟರಿ ಸೇವೆಗಳು, ಇಮೇಜಿಂಗ್ ಸೇವೆಗಳು (ಪಿಇಟಿ, ಸಿಟಿ, ಎಕ್ಸರೇ) ಮತ್ತು ಇದಕ್ಕೆ ಸಂಬಂಧಿಸಿದ ಮತ್ತಿತರೆ ಸೇವೆಗಳನ್ನು ನೀಡಲಾಗುತ್ತಿದೆ. ರೋಗಿಗಳ ಸೇವೆಗಾಗಿ ಸುಸಜ್ಜಿತ ಆಂಬ್ಯುಲೆನ್ಸ್ ವ್ಯವಸ್ಥೆ ಇದ್ದು, ಅತ್ಯಾಧುನಿಕವಾದ ಲಿನ್ಯಾಕ್ (ಲೀನಿಯರ್‍ ಎಕ್ಸಲೇಟರ್) ಯಂತ್ರವನ್ನು ಹೊಂದಿದೆ. ಸದ್ಯದಲ್ಲೇ ಮತ್ತೊಂದು ಯಂತ್ರವನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

Leave a Reply

comments

Related Articles

error: