ದೇಶ

ಬಾಲಿವುಡ್ ಸಂಗೀತ ಸಂಕಲನಕಾರ ಸಜಿದ್ ವಜಿದ್ ಬಿಜೆಪಿಗೆ ಸೇರ್ಪಡೆ

ಖ್ಯಾತ ಬಾಲಿವುಡ್ ಸಂಗೀತ ಸಂಕಲನಕಾರ ಸಜಿದ್ ವಜಿದ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಬಿಜೆಪಿಗೆ ಸೇರ್ಪಡೆಯಾದರು.

ಆಜಾತ ಶತೃ ಅಟಲ್ ಜೀ ಹುಟ್ಟಹಬ್ಬ ನಿಮಿತ್ತ ಬಿಜೆಪಿ ಯುವಮೋರ್ಚಾ ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ಸಜಿದ್ ವಜಿದ್ ಹಾಗೂ ಅವರಿಬ್ಬರ ಸೋದರರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಮಾತನಾಡಿ ಅಟಲ್ ಜೀ ಜನ್ಮದಿನದಂದು ಎಲ್ಲರೂ ಭಾರತವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆಂದು ಪಣತೊಡೋಣವೆಂದರು. ಪ್ರಧಾನಿ ನರೇಂದ್ರ ಮೋದಿಯವರು ಅಟಲ್ ಜೀ ಅವರ ಕನಸನ್ನು ನನಸು ಮಾಡುವರು ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

Leave a Reply

comments

Related Articles

error: