
ದೇಶ
ನಿಗೂಢವಾಗಿ ಸಾವನ್ನಪ್ಪಿದ್ದ ನರ್ಸ್ ಮೃತದೇಹ ಹುಟ್ಟೂರಿಗೆ
ಶಿರ್ವ,ಸೆ.28-ಎರಡು ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಉಡುಪಿಯ ಶಿರ್ವ ಮೂಲದ ನರ್ಸ್ ಹೆಝಲ್ ಜ್ಯೋತ್ಸ್ನಾ ಕ್ವಾಡ್ರಸ್ (30) ಅವರ ಮೃತದೇಹ ಇಂದು ಮಧ್ಯಾಹ್ನ ಸ್ವಗೃಹ ತಲುಪಿದೆ.
ಹೆಝೆಲ್ ಮೃತದೇಹ ಗುರುವಾರ ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿತು. ಅಲ್ಲಿಂದ ಶವವನ್ನು ಆಂಬ್ಯುಲೆನ್ಸ್ ಮೂಲಕ ಮಣಿಪಾಲದ ಆಸ್ಪತ್ರೆಗೆ ಕರೆತರಲಾಗಿತ್ತು. ಸಂಜೆ ವೇಳೆಗೆ ಅಂತಿಮ ಸಂಸ್ಕಾರ ನಡೆಯಲಿದೆ.
ಹೆಝೆಲ್ ಜು.19 ರಂದು ನಿಗೂಢವಾಗಿ ಸಾವನ್ನಪ್ಪಿದ್ದರು. ಹೆಝೆಲ್ ಮೃತದೇಹವನ್ನು ಹುಟ್ಟೂರಿಗೆ ತರಲು ಉಡುಪಿ ಜಿಲ್ಲಾಡಳಿತದಿಂದ ನಿರಂತರ ಪ್ರಯತ್ನ ಮಾಡಿತ್ತು. ಹೆಝೆಲ್ ಅವರು ಸೌದಿ ಸರ್ಕಾರಿ ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ದಾದಿಯಾಗಿ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. (ಎಂ.ಎನ್)