ಮೈಸೂರು

ಶವವಿರಿಸಿ ಪ್ರತಿಭಟನೆ : ಸ್ಥಳಕ್ಕಾಗಮಿಸಿದ ಅಧಿಕಾರಿಗಳು

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಸ್ಮಶಾನ ಜಾಗ ನಿಗದಿಪಡಿಸುವಂತೆ ಒತ್ತಾಯಿಸಿ ಮಗುವಿನ ಮೃತದೇಹವನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾಡಳಿತ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದೆ. ಉಪತಹಶೀಲ್ದಾರ್  ರಾಮ್ ಪ್ರಿಯಾ, ವಿಎ ಡಿಸೋಜಾ, ರೆವಿನ್ಯೂ ಇನ್ಸಪೆಕ್ಟರ್ ಕೃಷ್ಣಾಚಾರ್ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.

ಗ್ರಾಮದ ಕರೀಗೌಡರ ಜಮೀನಿನಲ್ಲಿ ಈ ದಿನ ಮಗುವಿನ ಶವಸಂಸ್ಕಾರಕ್ಕೆ ಸ್ಥಳ ನೀಡಲಾಗಿದ್ದು, ಎರಡು ಎಕರೆ ಜಮೀನನನ್ನು ಸ್ಮಶಾನಕ್ಕೆ ಮಂಜೂರು ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು. 15 ದಿನಗಳಲ್ಲಿ ಗ್ರಾಮ ಪಂಚಾಯತ್ ಗೆ ಪತ್ರ ನೀಡುವ ಭರವಸೆ ನೀಡಿದರು.

ಸೋಮವಾರ ನಂಜನಗೂಡು ತಾಲೂಕಿನ ಅಹಲ್ಯ ನಗರದಲ್ಲಿನ ನಿವಾಸಿಗಳು, ಇಲ್ಲಿ ಸತ್ತರೆ ಹೂಳಲು ಜಾಗವಿಲ್ಲ, ಇದರಿಂದ ಸ್ಥಳೀಯರಿಗೆ ತೀವ್ರ ತೊಂದರೆಯುಂಟಾಗಿದೆ, ನಮಗೆ ಸ್ಮಶಾನಕ್ಕೆ ಜಾಗ ಒದಗಿಸಿ ಕೊಡಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇಲ್ಲಿನ ಮಂಜುನಾಥ್ ಎಂಬವರ ಎರಡು ವರ್ಷದ ಮಗು ಕೈಲಾಸ್ ಕುಮಾರ್ ಅನಾರೋಗ್ಯದಿಂದ ಮೃತಪಟ್ಟಿತ್ತು. ತಮಗೆ ಮಗುವನ್ನು ಮಣ್ಣು ಮಾಡುವುದಕ್ಕೂ ಇಲ್ಲಿ ಜಾಗವಿಲ್ಲ. ತಹಶೀಲ್ದಾರ್ ಸ್ಥಳಕ್ಕೆ ಬರುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ನಮಗೆ ಸ್ಮಶಾನಕ್ಕೆ ಜಾಗ ಒದಗಿಸಿಕೊಡಿ ಎಂದ ಹೇಳಿದ್ದರು. ಅದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

Leave a Reply

comments

Related Articles

error: