ಮೈಸೂರು

ಲಂಚಕ್ಕೆ ಬೇಡಿಕೆ; ಎಸಿಬಿಯಿಂದ ಮೊರಾರ್ಜಿ ಶಾಲೆಯ ಮುಖ್ಯೋಪಾಧ್ಯಾಯ, ವಾರ್ಡನ್ ಬಂಧನ

nanjangud-bribery
ಮೊರಾರ್ಜಿ ಶಾಲೆಯ ಮುಖ್ಯೋಪಾಧ್ಯಾಯ ಮಂಜಯ್ಯ ಹಾಗೂ ವಾರ್ಡನ್ ಗಣಪತಿ.

ಕಂಪ್ಯೂಟರ್‌ ಅಳವಡಿಕೆ ಹಾಗೂ ಇತರೆ ಸಾಫ್ಟ್’ವೇರ್ ಕೆಲಸ ಮಾಡಿದವರಿಗೆ ಚೆಕ್ ವಿತರಿಸಲು ಎರಡು ಸಾವಿರ ಲಂಚ ಕೇಳಿದ ಮೊರಾರ್ಜಿ ಶಾಲೆಯ ಮುಖ್ಯೋಪಾಧ್ಯಾಯ ಮಂಜಯ್ಯ ಹಾಗೂ ವಾರ್ಡನ್ ಗಣಪತಿ ಅವರು ಭ್ರಷ್ಟಾಚಾರ ನಿಗ್ರಹ ದಳ -ಎಸಿಬಿ ಬಲೆಗೆ ಬಿದ್ದಿದ್ದಾರೆ.

ನಂಜನಗೂಡಿನ ಗೂಳೂರು ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ ಕಂಪ್ಯೂಟರ್ ಅಳವಡಿಕೆ ಹಾಗೂ ಇತರೆ ಸಾಮಾಗ್ರಿಗೆ ಟೆಂಡರ್ ಕರೆಯಲಾಗಿತ್ತು. ಕೆಲಸ ಮುಗಿದ ನಂತರ ಸಂಭಾವನೆ ಚೆಕ್ ನೀಡಲು ಎರಡು ಸಾವಿರ ಲಂಚಕ್ಕೆ ಮಂಜಯ್ಯ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ದೂರುದಾರರ ಮಾಹಿತಿ ಮೇರೆಗೆ ಎಸಿಬಿ ಎಸ್.ಪಿ. ಕವಿತಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಲಂಚ ಪಡೆಯುವ ವೇಳೆಯೇ ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ಎಸಿಬಿ ಎಸ್.ಪಿ. ಕವಿತಾ ‘ಸಿಟಿಟುಡೆ’ಗೆ ಮಾಹಿತಿ ನೀಡಿದ್ದಾರೆ.

Leave a Reply

comments

Related Articles

error: