
ಸುದ್ದಿ ಸಂಕ್ಷಿಪ್ತ
ವಿದ್ಯುತ್ ನಿಲುಗಡೆ
ಮೈಸೂರು, ಸೆ.29:- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 KV ಸೌತ್ (ದಕ್ಷಿಣ) ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಕೆ.ಎಂ.ಪಿ. ಮತ್ತು ಲಕ್ಷ್ಮೀಪುರಂ ಫೀಡರ್ ಮತ್ತು 66/11 KV ಜ್ಯೋತಿನಗರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಕಾವೇರಿ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 29 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ 11 ಕೆ.ವಿ. ಕೆ.ಎಂ.ಪಿ. ಮತ್ತು ಲಕ್ಷ್ಮೀಪುರಂ, ಫೀಡರ್ನ ಪ್ರದೇಶಗಳು, ಸ್ಯಾಂಡಲ್ವುಡ್, ಅಶೋಕಪುರಂ, ಕೃಷ್ಣಮೂರ್ತಿಪುರಂ, ಬಲ್ಲಾಳ್ ಸರ್ಕಲ್, ನೆಲ್ಲೂರ್ ಶೆಡ್, ಮೇದರ್ ಕೇರಿ, ಸೀತಾರಂಗ, ಲಕ್ಷ್ಮೀಪುರಂ, ಹೊಸಕೇರಿ, ಕಾಕಲವಾಡಿ, ಜೈನ್ ಭವನ್, ಹಾಗೂ ಕಾವೇರಿ ಆಸ್ಪತ್ರೆ, ಯರಗನಹಳ್ಳಿ, ವಿದ್ಯಾನಗರ ಬಡಾವಣೆ, ರಾಜ್ ಕುಮಾರ್ ರಸ್ತೆ, ರಿಂಗ್ ರಸ್ತೆ, ಪಾಪಣ್ಣ ಬಡಾವಣೆ, ಗುರುರಾಜ್ ಬಡಾವಣೆ, ರಾಘವೇಂದ್ರನಗರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)