ಮೈಸೂರು

ಸೆ.30: ‘ಹೃದಯಗಳ ಬೆಸುಗೆ’

ಮೈಸೂರು, ಸೆ.29:- ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಸೆ.30ರಂದು ಭಾನುವಾರ ಸಂಜೆ 6 ಗಂಟೆಗೆ ‘ಹೃದಯಗಳ ಬೆಸುಗೆ’ ಪ್ರವಾಸೋದ್ಯಮದ ಬಗ್ಗೆ ಒಂದು ವಿಶೇಷ ಕಾರ್ಯಕ್ರಮವನ್ನು ‘ಜ್ಞಾನ ಪ್ರಕಾಶ ಭವನ’, 2ನೇ ಮುಖ್ಯರಸ್ತೆ, ಯಾದವಗಿರಿಯಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮುಂಬಯಿ ಈ.ವಿ.ವಿ. ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥರಾದ ಬಿಕೆ ಮೀರಾಜಿಯವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಈ.ವಿ.ವಿ. ಮೈಸೂರು ಉಪ ವಿಭಾಗದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿಕೆ ಲಕ್ಷ್ಮೀಜಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ಅಡುಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಶ್ರೀನಿವಾಸ ರಾವ್ ಹಾಗೂ ಭಾರತ್ ಇಂಟರ್‍ ನ್ಯಾಷನಲ್ ಟ್ರಾವೆಲ್ಸ್ ನಿರ್ದೇಶಕ ಮಹೇಂದ್ರ ಸಾಲಿಯಾನ್‍ರವರು ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಮುಂಬಯಿ ಈ.ವಿ.ವಿ. ಪ್ರವಾಸೋದ್ಯಮ ವಿಭಾಗದ ರಾಷ್ಟ್ರೀಯ ಸಂಚಾಲಕಿ ಬಿಕೆ ಕಮಲೇಶ್‍ಜೀ ಹೇಳಲಿದ್ದಾರೆ.

ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ಬಿ.ಕೆ.ರಂಗನಾಥ್‍ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ 9448368019 ಅಥವಾ 7975785643 ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: