ಕರ್ನಾಟಕ

ಸರ್‌ಎಂವಿಗೆ ನಮಿಸಿ ಇದು ಯಾರ ಸಮಾಧಿ ಎಂದ ಅರಣ್ಯ ಸಚಿವ ಶಂಕರ್!

ಚಿಕ್ಕಬಳ್ಳಾಪುರ (ಸೆ.29): ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಬಳಿಕ ಇದು ಯಾರ ಸಮಾಧಿ ಎಂದು ಕೇಳಿ ಸಚಿವ ಆರ್.ಶಂಕರ್ ಅವರು ಅಪಹಾಸ್ಯಕ್ಕೀಡಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮೊದಲೇ ನಿಗದಿ ಮಾಡಿದಂತೆ ಅರಣ್ಯ ಸಚಿವ ಆರ್ ಶಂಕರ್ ವಿಶ್ವೇಶ್ವರಯ್ಯ ಜನ್ಮ ಸ್ಥಳವಾದ ಮುದ್ದೇನಹಳ್ಳಿಗೆ ತೆರಳಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇದು ಯಾರ ಸಮಾಧಿ ಎಂದು ಸಾರ್ವಜನಿಕವಾಗಿಯೇ ತಮ್ಮ ಆಪ್ತ ಸಹಾಯಕರನ್ನು ಕೇಳುವ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

ಸಮಾಧಿಯ ಬಳಿಯೇ ವಿಶ್ವೇಶ್ವರಯ್ಯ ಪುತ್ಥಳಿ ಇದ್ದರೂ ಅದನ್ನು ಗಮನಿಸಿರಲಿಲ್ಲ. ಬಳಿಕ ಮುದ್ದೇನಹಳ್ಳಿಯಲ್ಲಿ ನಿರ್ಮಿಸಿರುವ ಸರ್ ಎಂವಿ ಪ್ರತಿಮೆಯನ್ನು ಉದ್ಘಾಟಿಸಿದರು. ಈ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿದರು. ಕಾರ್ಯಕ್ರಮಗಳು ಸಾಮಾನ್ಯವಾಗಿ ಒಂದು ತಿಂಗಳು ಇರುವಾಗಲೇ ಸಚಿವರಿಗೆ ಆಹ್ವಾನ ನೀಡಲಾಗುತ್ತದೆ, ಅದು ಹಾಗಿರಲಿ ಕಾರ್ಯಕ್ರಮಕ್ಕೆ ಬರುವ ವೇಳೆಯಾದರೂ ಯಾವ ಕಾರ್ಯಕ್ರಮ ಎಂದು ಕೇಳಬಹುದಿತ್ತು, ತಾವು ಎಲ್ಲಿಗೆ ಆಗಮಿಸಿದ್ದೇವೆ ಎಂಬುದೇ ಸಚಿವರಿಗೆ ತಿಳಿಯದಿರುವದಕ್ಕೆ ಸರ್ವಜನಿಕರು ಬೇಸರ ವ್ಯಕ್ತಪಡಿಸಿದರು. (ಎನ್.ಬಿ)

Leave a Reply

comments

Related Articles

error: