
ದೇಶಪ್ರಮುಖ ಸುದ್ದಿ
ನಾನು ಮೋದಿಗೆ ಗುರು ಎಂದು ವಿಐಪಿ ಸೌಲಭ್ಯ ಪಡೆಯುತ್ತಿದ್ದವನ ಬಂಧನ!
ನವದೆಹಲಿ (ಸೆ.29): “ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧ್ಯಾತ್ಮಿಕ ಗುರು..” ಎಂದು ಹೇಳಿಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ ಗಣ್ಯವ್ಯಕ್ತಿಗಳಿಗೆ ನೀಡುತ್ತಿದ್ದ ಸವಲತ್ತು ಪಡೆಯುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪುಲಕಿತ್ ಎಂಬ ವ್ಯಕ್ತಿಯೇ ಪ್ರಧಾನಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಬಂಧನಕ್ಕೀಡಾಗಿರುವ ವ್ಯಕ್ತಿ. ಈತನ ಕೃತ್ಯಗಳ ಬಗ್ಗೆ ಮಾಹಿತಿ ಪಡೆದಿದ್ದ, ಪ್ರಧಾನಿ ಕಚೇರಿಯು ಪುಳಕಿತ್ ವಿರುದ್ಧ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈತ ಪ್ರಧಾನಿ ಮೋದಿ ಸೇರಿದಂತೆ ವಿವಿಧ ಗಣ್ಯರ ಜೊತೆಗಿರುವ ಫೋಟೋ ತೋರಿಸಿ, ವಿಐಪಿ ಸವಲತ್ತು ಪಡೆದುಕೊಳ್ಳುತ್ತಿದ್ದ ಮಾಹಿತಿ ಲಭಿಸಿದ ಕಾರಣ ದೂರು ದಾಖಲಿಸಲಾಗಿತ್ತು. (ಎನ್.ಬಿ)