ಮೈಸೂರು

ವಿವಿಯಲ್ಲಿ ನಿಬಂಧಮಾಲಿಕೆ ಬಿಡುಗಡೆ

ಮೈಸೂರು ವಿವಿ ಯ ಯು.ಜಿ.ಸಿ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರದ ವತಿಯಿಂದ ಪದವಿ ಕಾಲೇಜು ಮತ್ತು ವಿವಿ ಯ ಸಹಾಯಕ ಪ್ರಾಧ‍್ಯಾಪಕರಿಗಾಗಿ 3 ವಾರಗಳ ಕಾಲ ಮೂರನೇ ಚಳಿಗಾಲದ ಅಧಿವೇಶನ (ಮಾನವ ಹಕ್ಕುಗಳ ಪುನಶ್ಚೇತನ ಶಿಬಿರ), ಮತ್ತು ನಿಬಂಧ ಮಾಲಿಕೆ ಬಿಡುಗಡೆ ಕಾರ್ಯಕ್ರಮವನ್ನು ಸೋಮವಾರ ಯು.ಜಿ.ಸಿ. ಮಾನವ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೈಸೂರು ವಿ.ವಿ.ಯ ಕುಲಸಚಿವ ಪ್ರೊ. ಕೆ.ಎಸ್. ರಂಗಪ್ಪ ನಿಬಂಧ ಮಾಲಿಕೆ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, 1948 ರ ಡಿಸೆಂಬರ್ 10 ರಂದು ಮಾನವ ಹಕ್ಕುಗಳ ಆಯೋಗ ಜಾರಿಗೆ ಬಂದಿತು. ಇಂದು ಮಾನವ ಹಕ್ಕುಗಳು ಸಕಾರಾತ್ಮಕವಾಗಿವೆ. ನಮ್ಮ ಭಾರತೀಯ ವೇದಗಳಲ್ಲಿ ಸಹ ಮಾನವ ಹಕ್ಕುಗಳ ಬಗ್ಗೆ ಉಲ್ಲೇಖವಿದೆ. ಮಾನವ ಹಕ್ಕುಗಳ ಜೊತೆಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಶಿಕ್ಷಣ ಹಕ್ಕುಗಳು ಸಹ ಪ್ರಮುಖವಾಗುತ್ತವೆ. ನಾಗರಿಕ ಸಮಾಜದಲ್ಲಿ ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ.

ಭಾರತದಲ್ಲಿ ಮಾನವ ಹಕ್ಕುಗಳು ಎಂಬ ವಿಷಯ ತುಂಬಾ ಜಟಿಲವಾಗಿದೆ. ಇದಕ್ಕೆ ಕಾರಣ ಸರಿಯಾದ ಶಿಕ್ಷಣದ ಕೊರತೆ, ವಿಸ್ತಾರದಲ್ಲಿ ದೊಡ್ಡ ದೇಶ ಮತ್ತು ಹೆಚ್ಚು ಜನಸಂಖ್ಯೆ, ವಿಭಿನ್ನ ಸಂಸ್ಕೃತಿ ಎಂದು ಹೇಳಿದರು.

‘ಸಮಕಾಲೀನ ಭಾರತದಲ್ಲಿನ ಅಂಚಿನಲ್ಲಿರುವ ಸಾಮಾಜಿಕ ಗುಂಪುಗಳ ಮಾನವ ಹಕ್ಕುಗಳು’ ಎಂಬ ವಿಷಯ ಕುರಿತಾಗಿ ಭಾರತ ವಿವಿಯ ರಾಷ್ಟ್ರೀಯ ಕಾನೂನು ಶಾಲೆಯ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಜಿ. ಹರಗೋಪಾಲ್ ಮಾತನಾಡಿದರು. ಯು.ಜಿ.ಸಿ. ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರದ ನಿರ್ದೇಶಕಿ ಪ್ರೊ. ಮಿಡತಲ ರಾಣಿ ಉಪಸ್ಥಿತರಿದ್ದರು.

Leave a Reply

comments

Related Articles

error: