ಮೈಸೂರು

ಡಿ.28: ಜೆ.ಕೆ.ಟೈರ್ಸ್ ನಲ್ಲಿ ವಿದೇಶಿ ಪ್ರತಿನಿಧಿಗಳೊಂದಿಗೆ ಸಭೆ

ಮೈಸೂರಿನಲ್ಲಿರುವ ಜೆ.ಕೆ.ಟೈರ್ಸ್ ಕಂಪನಿಯಲ್ಲಿ  ಡಿ.28ರಂದು ವಿದೇಶಿ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ನಡೆಯಲಿದೆ.

ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಹಣಕಾಸು ಸೌಲಭ್ಯ, ಒಟ್ಟಾರೆ ಗುಣ ನೀತಿ, ಕೈಗಾರಿಕೆಗಳಿಗೆ ಸರ್ಕಾರದ ಬೆಂಬಲ ಸೇವೆ, ಕೈಗಾರಿಕಾಭಿವೃದ್ದಿಯಲ್ಲಿ ಕೈಗಾರಿಕಾ ಸಂಘಟನೆಗಳ ಪಾತ್ರದ ಬಗ್ಗೆ ನೇರವಾಗಿ ತಿಳಿಯಲು ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಈಜಿಪ್ಟ್, ಶ್ರೀಲಂಕಾ, ವಿಯೆಟ್ನಾಂ, ಬಾಂಗ್ಲಾದೇಶ್, ಅಪ್ಘಾನಿಸ್ತಾನ್, ಜೊರ್ಡಾನ್, ಉಗಾಂಡ, ಮಯನ್ಮಾರ್, ಕ್ಯೂಬಾ, ತಜಕಿಸ್ತಾನ್, ಇತಿಯೋಪಿಯ ಮುಂತಾದ 20 ದೇಶಗಳ ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಹಣಕಾಸು ಸಂಸ್ಥೆಗಳ 56 ಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಡಿ. 28 ರಂದು, ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಕೆ. ಟೈರ್ಸ್ ಕಾರ್ಖಾನೆಗೆ ಭೇಟಿ ನೀಡಿ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷರು ಹಾಗೂ ಶಾಸಕವಾಸು, ಉಪಾಧ್ಯಕ್ಷ ಜೆ.ಕೆ. ಟೈರ್ಸ್‍ನ  ಉಮೇಶ್ ಕೆ. ಶೆಣೈ ಮತ್ತು ಪದಾಧಿಕಾರಿಗಳೊಡನೆ ಸಮಾಲೋಚಿಸಲಿದ್ದಾರೆ.

ಹೈದರಾಬಾದ್‍ನಲ್ಲಿರುವ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಂತ್ರಾಲಯದ ರಾಷ್ಟ್ರೀಯ ತರಬೇತಿ ಸಂಸ್ಥೆಯ ತರಬೇತಿ ಯೋಜನೆಯ ಒಂದು ಭಾಗವಾದ ಅಧ್ಯಯನ ಪ್ರವಾಸದ ಮೇರೆಗೆ ಈ ತಂಡ ಮೈಸೂರಿಗೆ ಬಂದಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಸತೀಶ್ ಹಾಗೂ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್  ತಿಳಿಸಿದ್ದಾರೆ.

Leave a Reply

comments

Related Articles

error: