ಪ್ರಮುಖ ಸುದ್ದಿ

ನನಗೆ ಪೊಲೀಸ್ ಇಲಾಖೆಯಲ್ಲಿಯೇ ನೌಕರಿ ಕೊಡಿ : ಪೊಲೀಸರ ಗುಂಡಿಗೆ ಬಲಿಯಾದ ವಿವೇಕ್ ಪತ್ನಿ ಬೇಡಿಕೆ

ದೇಶ(ಲಕ್ನೋ)ಸೆ.29:- ಉತ್ತರ ಪ್ರದೇಶದ ಪೊಲೀಸರ ಗುಂಡಿಗೆ ಬಲಿಯಾದ  ಆ್ಯಪಲ್ ಕಂಪನಿಯ ಏರಿಯಾ ಮ್ಯಾನೇಜರ್ ವಿವೇಕ್ ತಿವಾರಿ ಪತ್ನಿ ಮುಖ್ಯಮಂತ್ರಿ ಆದಿತ್ಯ ನಾಥ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ತನಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಕೇಳಿದ್ದಾರೆ.

ಅಷ್ಟೇ ಅಲ್ಲದೇ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸುವಂತೆಯೂ ಬೇಡಿಕೆಯಿಟ್ಟಿದ್ದಾರೆ. ಆ್ಯಪಲ್ ಏರಿಯಾ ಮ್ಯಾನೇಜರ್ ವಿವೇಕ್ ತಿವಾರಿಯನ್ನು ಗುಂಡಿಕ್ಕಿ ಕೊಂಡ ಪೊಲೀಸರನ್ನು ಜೈಲಿಗೆ ಕಳುಹಿಸಲಾಗಿದೆ. ಈ ಕುರಿತು ಮಾತನಾಡಿರುವ ವಿವೇಕ್ ಪತ್ನಿ ನಾನು ರಾತ್ರಿ ಒಂದೂವರೆ ಸುಮಾರಿಗೆ ಅವರೊಂದಿಗೆ ಮಾತನಾಡಿದ್ದೆ. ನಿನ್ನೆ ಆ್ಯಪಲ್ ಫೋನ್ ಬಿಡುಗಡೆಯಿತ್ತು. ಅದರಿಂದ ಅವರು ಬರುವುದು ತಡವಾಗಿತ್ತು. ಮೂರುವರೆಗೆ ಕರೆ ಮಾಡಿದಾಗ ಯಾರೋ ಮಾತನಾಡಿ ಅಪಘಾತವಾಗಿದೆ. ಲೋಹಿಯಾಗೆ ಬನ್ನಿ ಎಂದರು. ಅಪಘಾತದ ಕುರಿತು ಹೇಳಿದ್ದರೇ ವಿನಃ ಗುಂಡುಹಾರಿಸಿದ್ದರ ಕುರಿತು ತಿಳಿಸಿರಲಿಲ್ಲ. ಅಪಘಾತವಾದ ಸ್ಥಳಕ್ಕೆ ತೆರಳಿದೆ. ಗಾಡಿಯಲ್ಲಿ ಗುಂಡು ಹೊಡೆದ ಗುರುತಿತ್ತು. ಅವರು ಗಾಡಿ ನಿಲ್ಲಿಸಲಿಲ್ಲವೆಂದ ಕಾರಣಕ್ಕೆ ಯಾವ ರೀತಿಯ ಅಪರಾಧವಾಯಿತು. ನನಗೆ ಮುಖ್ಯಮಂತ್ರಿ ಯೋಗಿಯವರಿಂದ ಉತ್ತರ ಬೇಕು ಎಂದಿದ್ದಾರೆ. ಯೋಗಿಯವರು ಯಾವ ಕಾನೂನು ಜಾರಿಗೆ ತಂದಿದ್ದಾರೆ. ಯಾವ ಕಾಯಿದೆ ಕಾನೂನು ರೂಪಿಸಿದ್ದಾರೆ. ವಿಷಯವೇನೇ ಇರಲಿ ಗುಂಡು ಹಾರಿಸುವ ಅಧಿಕಾರವನ್ನು ಯಾರು ಕೊಟ್ಟರು ಎಂದು ಪ್ರಶ್ನಿಸಿದ್ದಾರೆ. ನಮಗೆ ಯಾರೊಂದಿಗೂ ವೈರತ್ವವಿಲ್ಲ. ಗುಂಡು ಹಾರಿಸಿದ ವ್ಯಕ್ತಿಯನ್ನು ಭೇಟಿಯಾಗಬೇಕಿದೆ. ನನ್ನ ನಿರ್ದೋಷಿ ಪತಿಯನ್ನು ಯಾಕೆ ಕೊಂದಿದ್ದಾರೆ. ತಪ್ಪು ಮಾಡಿದ್ದರೆ ಜೈಲಿಗೆ ಕಳುಹಿಸಬಹುದಿತ್ತು. ಆದರೆ ಕೊಂದಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.  (ಎಸ್.ಎಚ್)

Leave a Reply

comments

Related Articles

error: