ಸುದ್ದಿ ಸಂಕ್ಷಿಪ್ತ
ಅ.2ರಂದು ಮಾವತರಿಗೆ – ಕಾವಡಿಗಳಿಗೆ ಕೇಶಾಲಂಕಾರ
ಮೈಸೂರು,ಸೆ.29 : ಸಿದ್ಧಾರ್ಥನಗರ ಸವಿತಾ ಸಮಾಜದ ವತಿಯಿಂದ ಮಾವತರು ಮತ್ತು ಕಾವಾಡಿಗಲಿಗೆ ಉಚಿತ ಕೇಶಾಲಂಕವನ್ನು ಅ.2ರ ಬೆಳಗ್ಗೆ 11 ಗಂಟೆಗೆ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ಧರಾಮಯ್ಯ, ಸಂಸದ ಪ್ರತಾಪ್ ಸಿಂಹ ಹಾಗೂ ಇತರರು ಭಾಗಿಯಾಗಲಿದ್ದಾರೆ ಎಂದು ಅಧ್ಯಕ್ಷ ಎಂ.ರಾಮು ಹಾಗೂ ಕಾರ್ಯದರ್ಶಿ ಶ್ರೀಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)