ಮೈಸೂರು

ಡಾ. ಧರಣಿದೇವಿ ಮಾಲಗತ್ತಿ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರು

ಚಾಲಕನ ನಿರ್ಲಕ್ಷ್ಯದಿಂದಾಗಿ ನಗರದ ಜೆ.ಎಲ್.ಬಿ. ರಸ್ತೆಯ ಮುಡಾ ವೃತ್ತದ ಬಳಿ ಸಂಭವಿಸಿದ ಕಾರುಗಳ ನಡುವಿನ ಅಪಘಾತದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಸೇರಿದಂತೆ ಇತರ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯು ಸೋಮವಾರ ಬೆಳಿಗ್ಗೆ ನಡೆದಿದ್ದು, ರೈಲ್ವೆ ನಿಲ್ದಾಣದ ಕಡೆಯಿಂದ ಮುಡಾ ವೃತ್ತದೆಡೆಗೆ ಬರುತ್ತಿದ್ದ ಕಾರು ಚಾಲಕ, ಮೈಸೂರು ವಿವಿ ಕ್ರಾಫರ್ಡ್ ಭವನದ ಕಡೆಯಿಂದ ಸೀತಾವಿಲಾಸ ರಸ್ತೆಯತ್ತ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು ಯಾವುದೇ ತೀವ್ರತರ ಹಾನಿ ಸಂಭವಿಸಿಲ್ಲ.

ಕಾರು ಚಾಲಕ ಜಬೀವುಲ್ಲಾ, ಕಾರಿನಲ್ಲಿದ್ದ ಕೆಪಿಎ ಡಿಡಿ ಡಾ.ಧರಣಿದೇವಿ ಮಾಲಗತ್ತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಢಿಕ್ಕಿ ಹೊಡೆದ ಇನ್ನೊಂದು ಕಾರಿನ ಚಾಲಕ ಶರತ್ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾನೆ, ಎರಡು ಕಾರುಗಳ ಮುಂಭಾಗ ಜಖಂ ಗೊಂಡಿವೆ.

ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದ್ದು ಕೆ.ಆರ್. ಸಂಚಾರ ಠಾಣೆಯಲ್ಲಿ  ಚಾಲಕ ಜಬೀವುಲ್ಲಾ ಪ್ರಕರಣ ದಾಖಲಿಸಿದ್ದಾರೆ. ಇನ್ಸ್ಪೆಕ್ಟರ್ ಎನ್.ಸಿ.ನಾಗೇಗೌಡ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

comments

Related Articles

error: