ಮೈಸೂರು

ಮಾಜಿ ಮೇಯರ್ ಅನಂತರನ್ನು ಎಂಎಲ್ಸಿ ಮಾಡುವಂತೆ ಒತ್ತಾಯ

ಮೈಸೂರು ಪೇಯಿಂಟ್ಸ್ ಮತ್ತು ವಾನಿರ್ಷ್ ಲಿಮಿಟೆಡ್ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಅನಂತ ಇವರನ್ನು ವಿಧಾನ ಪರಿಷತ್ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅನಂತ ಅವರ ಅಭಿಮಾನಿಗಳ ಸಂಘ ಒತ್ತಾಯಿಸಿದೆ.

ಅನಂತರವರು ಮಾಜಿ ಮೇಯರ್ ಆಗಿ ಮೈಸೂರು ಅಭಿವೃದ್ಧಿಗೆ ಶ್ರಮಿಸಿದ್ದು, ಕಾಂಗ್ರೆಸ್ ನಿಷ್ಠರಾಗಿ ಶುದ್ಧ ಹಸ್ತ ರಾಜಕಾರಣಿಯಾಗಿದ್ದಾರೆ. ಇವರನ್ನು ಎಂ.ಎಲ್.ಸಿ. ಮಾಡುವುದರಿಂದ ಹಿಂದುಳಿದ ವರ್ಗವಾದ ಗಾಣಿಗ ಸಮುದಾಯಕ್ಕೆ ಸ್ಥಾನ ಕಲ್ಪಿಸಿದಂತೆ ಆಗುವುದು. ಪ್ರಸ್ತುತ ಗಾಣಿಗ ಸಮುದಾಯದಿಂದ ಯಾರೊಬ್ಬರೂ ಪ್ರತಿನಿಧಿಸುತ್ತಿಲ್ಲ. ಅಲ್ಲದೇ ಅನಂತ್ ರವರ ಸೇವಾವಧಿಯಲ್ಲಿ ಮೈ.ಪೈ.ವಾ.ಲಿ ದಾಖಲೆ ಪ್ರಮಾಣದ ವಹಿವಾಟು ನಡೆಸಿ ಉತ್ತಮ ಲಾಭ ಗಳಿಸಿತ್ತು ಈ ಹಿನ್ನಲೆಯಲ್ಲಿ ಇವರಿಗೆ ವಾರ್ಷಿಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಮುಖ್ಯಮಂತ್ರಿಗಳು ನಮ್ಮ ಮನವಿ ಪುರಸ್ಕರಿಸಬೇಕೆಂದು ಅನಂತ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.

Leave a Reply

comments

Related Articles

error: