ಪ್ರಮುಖ ಸುದ್ದಿ

ಅಕ್ರಮ ವೇಶ್ಯಾವಾಟಿಕೆ ಅಡ್ಡೆಯಲ್ಲಿ  ಸಿಕ್ಕಿಬಿದ್ದ ಮಂಡ್ಯದ ಕಾಂಗ್ರೆಸ್ ಮುಖಂಡ

ರಾಜ್ಯ( ಮಂಡ್ಯ)ಅ.1:-  ಅಕ್ರಮ ವೇಶ್ಯಾವಾಟಿಕೆ ಅಡ್ಡೆಯಲ್ಲಿ  ಮಂಡ್ಯದ ಕಾಂಗ್ರೆಸ್ ಮುಖಂಡರೋರ್ವರು ಸಿಕ್ಕಿ ಬಿದ್ದಿದ್ದಾರೆ.

ಬೆಂಗಳೂರಿನಲ್ಲಿ‌ ನಿ‌ನ್ನೆ  ನಡೆದ  ಪಬ್ ಮೇಲಿನ ದಾಳಿ ವೇಳೆ ಕೈ ಮುಖಂಡರೋರ್ವರು ಸಿಕ್ಕಿ ಬಿದ್ದಿದ್ದು, ಮಂಡ್ಯ ತಾಲೂಕು ಹನಕೆರೆ ಗ್ರಾಮದ ಶಶಿ ವೇಶ್ಯಾವಾಟಿಕೆ ಅಡ್ಡಾದಲ್ಲಿ ವಿಟಪುರಷನಾಗಿ ಸೆರೆಯಾಗಿದ್ದಾರೆ. ಹನಕೆರೆಯ ಶಶಿ ಅಲಿಯಾಸ್  ತುಪ್ಪ ಶಶಿ ಸಿಕ್ಕಿ ಬಿದ್ದ ಕೈ ಮುಖಂಡರಾಗಿದ್ದು, ಕಾಂಗ್ರೆಸ್ ನಾಯಕ ಅಂಬರೀಷ್ ಕಟ್ಟಾ ಬೆಂಬಲಿಗ ಎನ್ನಲಾಗಿದೆ. ನಿನ್ನೆ ಅನೈತಿಕ ಚಟುವಟಿಕೆ ಮೇಲೆ ಬೆಂಗಳೂರು‌ ಪೊಲೀಸರು ದಾಳಿ ಮಾಡಿದ್ದರು. ಆ ವೇಳೆ ಯುವತಿಯೊಂದಿಗೆ  ಶಶಿ ಸಿಕ್ಕಿ ಬಿದ್ದಿದ್ದ  ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: