ಕರ್ನಾಟಕಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಜನಸಂಖ್ಯೆ 6.5 ಕೋಟಿ, ವಾಹನಗಳು 2 ಕೋಟಿ!

ಬೆಂಗಳೂರು (ಅ.1): ಕರ್ನಾಟಕದ ವಾಹನಗಳ ಒಟ್ಟು ಸಂಖ್ಯೆ 2 ಕೋಟಿಗಳಷ್ಟು ತಲುಪುತ್ತಿದ್ದು, ಸಾರ್ವಜನಿಕರು ಸಮೂಹ ಸಾರಿಗೆ ಬಿಟ್ಟು ಖಾಸಗಿ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿರುವುದು ಬೆಳಕಿಗೆ ಬಂದಿದೆ. ಸಾರಿಗೆ ಇಲಾಖೆ ಮೂಲಗಳ ಪ್ರಕಾರ ಜು.31ಕ್ಕೆ ರಾಜ್ಯದಲ್ಲಿ ಒಟ್ಟು 1.99 ಕೋಟಿ ವಾಹನಗಳಿದ್ದು ಕಳೆದ 7 ವರ್ಷಗಳಲ್ಲಿ ಶೇ.100ರಷ್ಟು ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ.

ಪ್ರತಿವರ್ಷ ಶೇ.8ರಿಂದ 10ರಷ್ಟು ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಸೆಪ್ಟೆಂಬರ್ ಅಂತ್ಯಕ್ಕೆ ವಾಹನಗಳ ಸಂಖ್ಯೆ ಒಟ್ಟು 2 ಕೋಟಿಗಳಷ್ಟಾಗಿದೆ. ಬೆಂಗಳೂರಲ್ಲಿ 76 ಲಕ್ಷ ವಾಹನಗಳಿವೆ, ಇನ್ನು ಕಲಬುರಗಿ ಜಿಲ್ಲೆ ಒಳಗೊಂಡಂತೆ ಕಲಬರಗಿ, ಬಳ್ಳಾರಿ, ರಾಯಚೂರು, ಯಾಗದಿರಿ ಜಿಲ್ಲೆಗಳಲ್ಲಿ ಒಟ್ಟು 19.3 ಲಕ್ಷ ವಾಹನಗಳಿವೆ. ಇನ್ನು ಬೆಂಗಳೂರು ಗ್ರಾಮಾಂತರ ವಿಭಾಗಗಳಲ್ಲಿ ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಂತೆ ಒಟ್ಟು 16.7 ಲಕ್ಷ ವಾಹನಗಳಿವೆ.

ಇದೇ ವರದಿ ಪ್ರಕಾರ ಸರ್ಕಾರ ಒದಗಿಸುತ್ತಿರುವ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿರುವುದರಿಂದ ಜನರು ಸರ್ಕಾರಿ ಬಸ್, ರೈಲು ಮೆಟ್ರೋ ಮತ್ತಿತರೆ ಸೇವೆಗಳಿಗಿಂತ ಹೆಚ್ಚಾಗಿ ತಮ್ಮ ಸ್ವಂತ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ರಾಜ್ಯದ ಒಟ್ಟು 1.99 ಕೋಟಿ ವಾಹನಗಳ ಪೈಕಿ 1.4 ಕೋಟಿಯಷ್ಟು ದ್ವಿಚಕ್ರ ವಾಹನಗಳೇ ಇದ್ದು, 23.7 ಲಕ್ಷ ಕಾರುಗಳಿವೆ. ಇನ್ನು ಕರ್ನಾಟಕದಲ್ಲಿರುವ ಸಮೂಹ ಸಾರಿಗೆ ವಾಹನಗಳನ್ನು ಗಮನಿಸಿದರೆ 1 ಲಕ್ಷ ಬಸ್‍ಗಳು, 1.3 ಲಕ್ಷ ಕ್ಯಾಬ್ ಗಳು ಹಾಗೂ 4.4 ಲಕ್ಷ ಆಟೋರಿಕ್ಷಾಗಳಿವೆ.

2008-9ರಲ್ಲಿ ಕರ್ನಾಟಕದಲ್ಲಿ ಒಟ್ಟು 82.9 ಲಕ್ಷ ವಾಹಗಳಿದ್ದರೆ, 20011-12ರಲ್ಲಿ 1ಕೋಟಿ ವಾಹನಗಳಿದ್ದವು. 2015-16 ರಲ್ಲಿ 1.6 ಕೋಟಿ ವಾಹನಗಳಿದ್ದರೆ, 2017-18 ಒಟ್ಟು ವಾಹನಗಳ ಸಂಖ್ಯೆ 1.90 ಲಕ್ಷ ತಲುಪಿದೆ. 2011 ರ ಜನಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆ 6.1 ಕೋಟಿ ಇದೆ. (ಎನ್.ಬಿ)

Leave a Reply

comments

Related Articles

error: