ಮೈಸೂರು

ಮೃತಪಟ್ಟಿದ್ದ ರೋಗಿಗೆ ಚಿಕಿತ್ಸೆ ನೀಡಿ ಹಣ ಪಡೆದ ಆರೋಪ : ಪೋಷಕರಿಂದ ಪ್ರತಿಭಟನೆ ; ಬಿಗುವಿನ ವಾತಾವರಣ

ಮೈಸೂರು,ಅ.1:- ಮೃತಪಟ್ಟಿದ್ದ ರೋಗಿಗೆ ಚಿಕಿತ್ಸೆ ನೀಡಿ ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನ ಯರಗನಹಳ್ಳಿ ಕಾವೇರಿ ಆಸ್ಪತ್ರೆಯ ಮುಂಭಾಗ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಹಲ್ಲಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿದ್ದ ಪ್ರೀತ್ಂ ಗೌಡ (22)ಸಾವನ್ನಪ್ಪಿದ್ದ . ಕಳೆದ ಶುಕ್ರವಾರ ಕಾವೇರಿ ಆಸ್ಪತ್ರಗೆ ದಾಖಲಾಗಿದ್ದ ಪ್ರೀತಮ್ ಗೌಡ ಸಾವನ್ನಪ್ಪಿದ್ದ. ಕಳೆದ 4 ದಿನಗಳಿಂದ ಚಿಕಿತ್ಸೆಗೆಂದು ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದ್ದು, ಆಸ್ಪತ್ರೆ ಸಿಬ್ಬಂದಿಗಳು 70 ಸಾವಿರ ಹಣ ಕಟ್ಟಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ ತಾನೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಭರವಸೆ ನೀಡಿದ ಅರ್ಧ ಗಂಟೆಯಲ್ಲಿ ಪ್ರೀತಮ್‌ಗೌಡ ಸಾವನ್ನಪ್ಪಿದ್ದಾರೆ. ಈ‌‌ ಮೊದಲೇ ನನ್ನ ಮಗ ಮೃತಪಟ್ಟರು ಚಿಕಿತ್ಸೆ ನೀಡಿದ್ದಾರೆಂದು ಆರೋಪ ಕೇಳಿ ಬಂದಿದ್ದು, ಪ್ರೀತಮ್ ಗೌಡ ಪೋಷಕರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ನೂರಾರು ಸಂಖ್ಯೆಯ ಜನರು ಜಮಾಯಿಸಿದ್ದು, ಪ್ರೀತಮ್ ಗೌಡ ಮೃತದೇಹ ಈಗಾಗಲೇ ಊದಿಕೊಂಡಿದೆ. ಇಷ್ಟು ಬೇಗ ಮೃತದೇಹ ಊದಿಕೊಳ್ಳಲು ಹೇಗೆ ಸಾಧ್ಯ ಎಂದು ಪೋಷಕರ ಗಲಾಟೆ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಆಲನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: