
ಪ್ರಮುಖ ಸುದ್ದಿ
ಕೊಡಗಿನಲ್ಲಿ ಜೆಡಿಎಸ್ ಕಾರ್ಯಕರ್ತನಿಂದ ಬಿಜೆಪಿ ಕಾರ್ಯಕರ್ತನ ಕೊಲೆ
ರಾಜ್ಯ(ಮಡಿಕೇರಿ)ಅ.1:- ಕೊಡಗು ಜಿಲ್ಲೆಯಲ್ಲಿ ಗುಂಡಿನ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕಾನಡ್ಕ ತಿಲಕ್ ರಾಜ್ (35) ಎಂದು ಗುರುತಿಸಲಾಗಿದೆ. ಗ್ರಾಮ ಪಂಚಾಯತ್ ಸದಸ್ಯ ಎಂ.ನಂದಾ ಎಂಬವರು ಗುಂಡಿನ ದಾಳಿ ನಡೆಸಿದ್ದಾರೆ. ಮರಗೋಡು ಪಟ್ಟಣದ ಹೋಟೆಲ್ ನಲ್ಲಿ ಘಟನೆ ನಡೆದಿದ್ದು, ರಾಜಕೀಯ ವೈಷಮ್ಯದಿಂದ ಗುಂಡಿನ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಬಿಜೆಪಿ ಕಾರ್ಯಕರ್ತ ತಿಲಕ್ ರಾಜ್ ಎಂದು ಗುರುತಿಸಲಾಗಿದ್ದು, ಕೃತ್ಯ ನಡೆಸಿದಾತ ಜೆಡಿಎಸ್ ಕಾರ್ಯಕರ್ತ ಎಂದು ಗುರುತಿಸಲಾಗಿದೆ. (ಕೆಸಿಐ,ಎಸ್.ಎಚ್)