ಪ್ರಮುಖ ಸುದ್ದಿ

ಹೆಮ್ಮನಹಳ್ಳಿ ಗ್ರಾಮ ಪಂಚಾಯತ್ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ

ರಾಜ್ಯ(ಮಂಡ್ಯ)ಅ.2:-  ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಯು ಸತತ ಎರಡನೇ ಬಾರಿಗೆ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಅ.2ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಳೆದ ವರ್ಷವೂ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು ಸರಕಾರಿ ಅನುದಾನಗಳ ಸಮರ್ಪಕ ಬಳಕೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ನೈರ್ಮಲ್ಯಕ್ಕೆ ಮೊದಲ ಆದ್ಯತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಧಿಸಿದ ಪ್ರಗತಿ ಜಲ ಮರುಪೂರಣಕ್ಕೆ ಆದ್ಯತೆ ಪರಿಗಣಿಸಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ

ಶೇಕಡ 90ರಷ್ಟು ತೆರಿಗೆ ವಸೂಲಾತಿ ನೀರಿನ ಬಿಲ್ ವಸೂಲಾತಿ ಹಂತ ಹಂತವಾಗಿ ಸಮರ್ಪಕವಾಗಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆ ಹನ್ನೆರಡು ತಿಂಗಳು ನಿಯಮಾನುಸಾರ ಸಾಮಾನ್ಯ ಸಭೆಗಳನ್ನು ನಡೆಸಿ ಪಂಚತಂತ್ರಕ್ಕೆ ಅಳವಡಿಕೆ ಗ್ರಾಮ ಸಭೆ ಸ್ಥಾಯಿ ಸಮಿತಿ ಸಭೆ ಇತರೆ ಸಮಿತಿ ಸಭೆ ಶುಚಿತ್ವದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಮಹಿಳಾ ಗ್ರಾಮ ಸಭೆ ಸಾರ್ವಜನಿಕ ರ್ಯಾಲಿಗಳನ್ನು ನಡೆಸುವ ಮೂಲಕ ಪರಿಣಾಮಕಾರಿಯಾಗಿ ಮಾಡಲಾಗಿದೆ ಪ್ರತಿ ತಿಂಗಳು ಗ್ರಾಮದ ವಿವಿಧ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ವಿನೂತನ ಕಾರ್ಯಕ್ರಮಗಳನ್ನು ಸಮಾಲೋಚನಾ ಸಭೆಗಳನ್ನು ನಡೆಸುತ್ತಿರುವುದು ಗ್ರಾಮದ ಅಂಗವಿಕಲರಿಗೆ ಮಾಹಿತಿ ಗ್ರಾಮ ಪಂಚಾಯಿತಿ ಅನುದಾನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಟ್ಟೆ ದಿನ ಬಳಕೆ ಸಾಮಗ್ರಿ ಪುಸ್ತಕಗಳನ್ನು ಪುನರ್ವಸತಿ ಕಾರ್ಯಕರ್ತರ ಸಹಕಾರದೊಂದಿಗೆ ಅಂಗವಿಕಲರಿಗೆ ಪ್ರತಿ ವರ್ಷ ವಿತರಿಸುವ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ

ವಿವಿಧ ಕೌಶಲ್ಯಗಳಾದ ಜೇನು ಕೃಷಿ ತೋಟಗಾರಿಕೆ ಬಯೋಗ್ಯಾಸ್ ಮಾಹಿತಿ ಕಾನೂನು ಅರಿವು ಶಿಬಿರ ಹೈನುಗಾರಿಕೆ ಮಾಹಿತಿ ನೀರು ಮತ್ತು ನೈರ್ಮಲ್ಯ ಮಾಹಿತಿ ಕಟ್ಟಡ ಕಾರ್ಮಿಕರಿಗೆ ಮಾಹಿತಿ ಮತ್ತು ನೋಂದಣಿ ಕಾರ್ಡ್ ಇತರೆ ಯೋಜನೆಗಳ ಮಾಹಿತಿ ಮತ್ತು ಗುರುತಿನ ಚೀಟಿ ವಿತರಣೆ ಬಾಪೂಜಿ ನೂರು ಸೇವೆಗಳ ಅಡಿಯಲ್ಲಿ ಸಾರ್ವಜನಿಕರಿಗೆ ವಿವಿಧ ಸೇವೆಗಳು ನಾಗರಿಕ ಸನ್ನದು ಸಮರ್ಪಕವಾಗಿ ಅನುಷ್ಠಾನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಮಾಹಿತಿ ಮಳೆಗಾಲದ ಮೊದಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚರಂಡಿಗಳ ದುರಸ್ತಿ ಪೈಪ್ ಕಾಂಪೋಸ್ಟ್ ಅಳವಡಿಕೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಜನೋಪಯೋಗಿ ಪಂಚಾಯಿತಿ ಆಗಿ ಮೂಡಿ ಬಂದ ಹಿನ್ನೆಲೆಯಲ್ಲಿ ತಜ್ಞರ ಆಯ್ಕೆ ಸಮಿತಿ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿಯನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಜಲ ಮರುಪೂರಣ ನೈರ್ಮಲ್ಯದ ಕುರಿತು ವಿವಿಧ ಕಾಮಗಾರಿಗಳ ಅನುಷ್ಠಾನ ನರೇಗಾ ಯೋಜನೆಯಲ್ಲಿ ವಿವಿಧ ಕಾಮಗಾರಿಗಳ ಅಳವಡಿಕೆ ಮಾದರಿ ಸ್ಮಶಾನ ಅಭಿವೃದ್ಧಿ ಜೈವಿಕ ಇಂಧನ ನೆಡುತೋಪು ರಸ್ತೆ ಕುಡಿಯುವ ನೀರಿನ ವ್ಯವಸ್ಥೆ ವಸತಿ ಯೋಜನೆಗಳ ಸಮರ್ಪಕ ಅನುಷ್ಠಾನ ಯುವಕ ಯುವತಿಯರಿಗೆ  ಸ್ವ ಉದ್ಯೋಗದ ಬಗ್ಗೆ ತರಬೇತಿ ಪ್ರೋತ್ಸಾಹ ಹದಿನಾಲ್ಕುನೇ ಹಣಕಾಸು ಅನುದಾನದ ಸಂಪೂರ್ಣ ವಿನಿಯೋಗ ಹದಿನಾಲ್ಕನೇ ಹಣಕಾಸು ಯೋಜನೆಯಡಿಯಲ್ಲಿ  ಗ್ರಾಮ ಪಂಚಾಯಿತಿಯ ಮೇಲ್ಭಾಗದಲ್ಲಿ ಸೋಲಾರ್ ವ್ಯವಸ್ಥೆ  ಮಾಡಲಾಗಿದ್ದು ಇದರಿಂದ ಗ್ರಾಮ ಪಂಚಾಯಿತಿಗೆ ಬೇಕಾಗಿರುವ ವಿದ್ಯುತ್ತನ್ನು ಅಲ್ಲೇ ಉತ್ಪಾದಿಸಿ ಕೊಳ್ಳಲಾಗುತ್ತಿದೆ

ಗ್ರಾಮಸ್ಥರ ಸಹಕಾರ ಸಂಘ ಸಂಸ್ಥೆಗಳ ಉತ್ತಮ ಸಹಕಾರ ಹಾಗೂ ಬೆಂಬಲ ಆಡಳಿತ ಮಂಡಳಿಯ ಉತ್ತಮ ಕಾರ್ಯದಿಂದಾಗಿ ಈ ಪ್ರಶಸ್ತಿ ಲಭಿಸಲು ಸಹಕಾರಿಯಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಲೀಲಾವತಿ ತಿಳಿಸಿದ್ದಾರೆ

ಈ ಹಿಂದೆ  ಸೋಮನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೂ ಅಲ್ಲಿಯೂ ಸಹ ಒಂದು ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ವಿಶೇಷವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: