ಮೈಸೂರು

ಪ್ರಯಾಣಿಕರ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ

ಬೈಲಕುಪ್ಪೆ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ 25000 ರೂ. ಮೌಲ್ಯದ ಮೊಬೈಲೊಂದನ್ನು ಆಟೋ ಚಾಲಕರೊಬ್ಬರು ಮಾಲೀಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬೈಲಕುಪ್ಪೆ ಸಮೀಪದ ದೊಡ್ಡ ಹರವೆ ಗ್ರಾಮದ ರವಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.

ಸೋಮವಾರ ಬೆಳಗ್ಗೆ ಹೈದರಬಾದ್‌ನಿಂದ ಗೊಲ್ಡನ್ ಟೆಂಪಲ್ ವಿಕ್ಷಣೆಗೆ ಆಗಮಿಸಿದ್ದ ರೆಹಾನಾ ಎಂಬುವರು ರವಿ ಎಂಬುವರ ಆಟೋದಲ್ಲಿ ಬೈಲಕುಪ್ಪೆಯಿಂದ ಟೆಂಪಲ್‌ಗೆ ಹೋಗಿದ್ದ ಸಂದರ್ಭ ಹಿಂಬದಿ ಸೀಟ್‌ನ ಕೆಳಭಾಗದಲ್ಲಿ ಮೊಬೈಲ್ ಬಿದ್ದು ಹೋಗಿತ್ತು. ಕೆಲ ಸಮಯದ ನಂತರ ರೆಹಾನಾರವರು ಮೊಬೈಲ್ ಇಲ್ಲದ್ದನ್ನು ಗಮನಿಸಿ ಬೈಲಕುಪ್ಪೆ ಆರಕ್ಷಕ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೆರೆಗೆ ಸಿಬ್ಬಂದಿ ರವಿಶ ಮತ್ತು ಕೃಷ್ಣ ಅಲ್ಲಿನ ಸಿ.ಸಿ ಕ್ಯಾಮರಗಳನ್ನು ಪರಿಶೀಲಿಸಿದರು. ಯಾವುದೇ ಸುಳಿವು ಸಿಗದೆ ವಾಪಸ್ ಹಿಂದಿರುಗುವಾಗ ಸ್ಥಳಿಯ ಆರಕ್ಷಕ ಠಾಣೆಗೆ ಆಗಮಿಸಿದ ಆಟೊ ಚಾಲಕ ರವಿ, ಠಾಣೆಗೆ ಆಗಮಿಸಿ ಮೊಬೈಲನ್ನು ಅವರಿಗೆ ಒಪ್ಪಿಸಿದ್ದರು. ಕಳೆದುಕೊಂಡ ವಸ್ತುವನ್ನು ಮರಳಿ ಪಡೆದ ಖುಷಿಯಲ್ಲಿ ರೆಹಾನಾರವರು ರವಿಗೆ ಧನ್ಯವಾದ ಸಲ್ಲಿಸಿದರು. ರವಿ ಅವರ ಪ್ರಾಮಾಣಿಕತೆಗೆ ಆಟೋ ಚಾಲಕರು, ಪೋಲಿಸರು, ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

– ರಾಜೇಶ್

Leave a Reply

comments

Related Articles

error: