ಮೈಸೂರು

ಹಿರಿಯ ಪೌರಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ : ಅರ್ಥಪೂರ್ಣ ಆಚರಣೆ ; ಭರತ್ ಕುಮಾರ್

ಮೈಸೂರು,ಅ.2:-ಆರೋಹಣಂ ಪೌಂಡೇಷನ್ ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ ಹಿರಿಯ ಪೌರಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮವನ್ನಿಂದು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ನ್ಯಾಯಾಲಯದ ಮುಂಭಾಗವಿರುವ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಗಾಂಧೀ ಜಯಂತಿ ಆಚರಿಸಿದರು. ನಂತರ  ಜಯಮ್ಮ, ನಂಜಮ್ಮ,ಕಮಲಾ,ರಾಜಮ್ಮ, ಕದ್ರೀ ಎಂಬ 5 ಮಂದಿ ಹಿರಿಯ ಪೌರ ಕಾರ್ಮಿಕರಿಗೆ ಜಿಲ್ಲಾ ಅಗ್ನಿ ಶಾಮಕ ದಳದ ಭರತ್ ಕುಮಾರ್ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಭರತ್ ಕುಮಾರ್ ಇಂದು ಎಲ್ಲೆಡೆ 150 ನೇ ಗಾಂದೀ ಜಯಂತಿಯನ್ನು ಆಚರಿಸಲಾಗುತ್ತಿದೆ.ಅಂತೆಯೇ  ಆರೋಹಣಂ ಪೌಂಡೇಷನ್ ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ ಹಿರಿಯ ಪೌರಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಸ್ವಚ್ಛತೆಗಾಗಿ ತೊಡಗಿದ್ದ ಹಿರಿಯ ಪೌರ ಕಾರ್ಮಿಕರಿಗೆ ಅಭಿನಂದಿಸುವ ಮೂಲಕ ಅರ್ಥ ಪೂರ್ಣವಾಗಿ ಗಾಂಧೀ ಜಯಂತಿ ಆಚರಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮಲ್ಲೇಶ್, ಅಧ್ಯಕ್ಷೆ ಸುನೀತ ಮತ್ತಿತರರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: