ಮೈಸೂರು

‘ವರ್ಕಿಂಗ್ ಆಫ್ ದಿ ಇಂಡಿಯನ್ ಕಾನ್ಸ್‍ಸ್ಟಿಟ್ಯೂಷನ್’ ಪುಸ್ತಕ ಬಿಡುಗಡೆಗೊಳಿಸಿದ ಮರಿತಿಬ್ಬೇಗೌಡ

ಮೈಸೂರು,ಅ.1-ವಿದ್ಯಾರ್ಥಿಗಳು ಮಾನವಿಯ ಮೌಲ್ಯಗಳನ್ನು ಅರಿತುಕೊಂಡರೆ ಮಾತ್ರ ಪರಿಪೂರ್ಣವಾಗಿ ಬೆಳೆಯಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿದರು.

ಜ್ಞಾನಬುತ್ತಿ ಸ್ಪರ್ಧಾತ್ಮಕ ಪರೀಕ್ಷಾ ಉಚಿತ ತರಬೇತಿ ಕೇಂದ್ರದ ವತಿಯಿಂದ ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜು ಕೊಠಡಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಹೆಚ್.ಎಂ.ರಾಜಶೇಖರ್ ರವರ ವರ್ಕಿಂಗ್ ಆಫ್ ದಿ ಇಂಡಿಯನ್ ಕಾನ್ಸ್ಸ್ಟಿಟ್ಯೂಷನ್ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸರ್ಕಾರ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಹೆಚ್.ಎಂ.ರಾಜಶೇಖರ್ ಬರೆದ ಭಾರತೀಯ ಸಂವಿಧಾನ ಪುಸ್ತಕ 16ನೇ ಮುದ್ರಣ ಹೊಂದಿರುವುದು ಶ್ಲಾಘನೀಯ, ಬಹಳಷ್ಟು ಮಂದಿ ಪುಸ್ತಕಗಳನ್ನು ಬರೆಯುತ್ತಾರೆ. ಆದರೆ, ಹೆಚ್.ಎಂ.ರಾಜಶೇಖರ್ ಅವರಂತೆ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಯಾರೂ ಬರೆದಿಲ್ಲ. ಅವರ ಕೃತಿಗಳು ಜನಪ್ರಿಯವಾಗಿದ್ದು, ನೂರಾರು ವಿದ್ಯಾರ್ಥಿಗಳು ಐಎಎಸ್ ಮತ್ತು ಕೆಎಎಸ್ ಬರೆಯಲು ಅವರು ಬರೆದ ಪುಸ್ತಕ ಸಹಕಾರಿಯಾಗಿದೆ ಎಂದು ಹೇಳಿದರು.

ಲಕ್ಷ್ಮಿಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಮತ್ತು ಜ್ಞಾನಬುತ್ತಿ ಸಂಸ್ಥೆಗೆ ಅನುಕೂಲವಾಗುವಂತೆ ಸಂಬಂಧ ಇನ್ನೊಂದು ವರ್ಷದಲ್ಲಿ 30 ಲಕ್ಷ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಕಾನೂನು ತಜ್ಞ ಪ್ರೊ.ಸಿ.ಕೆ.ಎನ್.ರಾಜ, ಕಾನೂನು ಸಲಹೆಗಾರ ಡಾ.ಎಂ.ಎನ್.ಭೀಮೇಶ್, ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ, ಕೃತಿ ಕರ್ತೃ ಪ್ರೊ.ಹೆಚ್.ಎಂ.ರಾಜಶೇಖರ್, ಜ್ಞಾನಬುತ್ತಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಹೆಚ್.ಬಾಲಕೃಷ್ಣ, ಪ್ರೊ.ಕೃ..ಗಣೇಶ, ಡಾ.ಎಸ್ಬಿಎಂ ಪ್ರಸನ್ನ ಇತರರು ಉಪಸ್ಥಿತರಿದ್ದರು. (ಎಂ.ಎನ್)

 

Leave a Reply

comments

Related Articles

error: