ಮೈಸೂರು

ಸರ್ದಾರ್ ರಾಮಚಂದ್ರರಾಜೇ ಅರಸ್ ಕುಟುಂಬಕ್ಕೆ ಭೂಮಿ ಹಸ್ತಾಂತರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸ್ವಾಧೀನ ಪಡಿಸಿಕೊಂಡಿದ್ದ 15.06 ಎಕ್ರೆ ಭೂಮಿಯನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ದಿವಂಗತ ಸರ್ದಾರ್ ಕೆ.ಬಿ. ರಾಮಚಂದ್ರರಾಜೇ ಅರಸ್ ಕುಟುಂಬಕ್ಕೆ ಹಸ್ತಾಂತರಿಸಿತು.

ಜೆಎಸ್‍ಎಸ್ ವ್ಯವಹಾರ ನಿರ್ವಹಣಾ ಕೇಂದ್ರದಲ್ಲಿ 15 ಎಕ್ರೆ 6 ಗುಂಟೆ ಪ್ರದೇಶವನ್ನು ರಾಮಚಂದ್ರರಾಜೇ ಅರಸ್ ಅವರ ಪುತ್ರ ಚದುರಂಗ ಕಾಂತರಾಜೆ ಅರಸ್, ಸುಂದರಿದೇವಿ, ಕೀರ್ತಿಮಾಲಿನಿದೇವಿ ಅವರಿಗೆ ಮುಡಾ ಆಯುಕ್ತ ಡಾ.ಎಂ. ಮಹೇಶ್ ಹಸ್ತಾಂತರಿಸಿದರು.

ಜೆಎಸ್ಎಸ್ ಮಹಾವಿದ್ಯಾಪೀಠ 55 ಎಕ್ರೆಯಲ್ಲಿ ನ್ಯಾಯಾಲಯಕ್ಕೆ ತಾವೇ ನೀಡಿದ್ದ ಮಾಹಿತಿಯಂತೆ ಖಾಲಿ ಇದ್ದ 15 ಎಕ್ರೆ 6 ಗುಂಟೆ ಪ್ರದೇಶವನ್ನು ಹಿಂದಕ್ಕೆ ನೀಡಿತ್ತು.

ದಿ. ಕೆ.ಬಿ. ರಾಮಚಂದ್ರರಾಜೇ ಅರಸ್ ಅವರ ಭೂಮಿಯನ್ನು ಹಿಂದಿರುಗಿಸಲು ಸುಪ್ರೀಂಕೋರ್ಟ್ ಸೆಪ್ಟೆಂಬರ್ 16ಕ್ಕೆ ಕೊನೆಯ ದಿನವನ್ನು ನಿಗದಿಪಡಿಸಿತ್ತು. ಗುರುತುಪಡಿಸಿದ ಜಾಗವನ್ನು ಅಧಿಕಾರಿಗಳು ಭೂಮಾಲಿಕರಿಗೆ ತೋರಿಸಿದರು. ಬಳಿಕ ಎಲ್ಲ ದಾಖಲೆ ಪತ್ರಗಳನ್ನು ಹಸ್ತಾಂತರಿಸಲಾಯಿತು.

Leave a Reply

comments

Related Articles

error: