ಮೈಸೂರು

ಗಾಂಧೀಜಿಯವರ ವ್ಯಕ್ತಿತ್ವವನ್ನು ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ : ಸಿ.ಪಿ. ರಾಮಶೇಷು

ಮೈಸೂರು, ಅ. 2:- ಸುತ್ತೂರು ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ  ಮಹಾತ್ಮ ಗಾಂಧಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಹಾಗೂ ವಿಶ್ವ ಹಿರಿಯರ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಗ್ರಂಥಪಾಲಕರಾದ  ಸಿ.ಪಿ. ರಾಮಶೇಷು ಅವರು ಗಾಂಧೀಜಿಯವರ  ಕುರಿತು ಮಾತನಾಡಿ, ನೇರ ನುಡಿ ಹಾಗೂ ಸರಳತೆಯನ್ನು ಗಾಂಧೀಜಿಯವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಉಪವಾಸ ಅವರ ಅವಿಭಾಜ್ಯ ಅಂಗವಾಗಿತ್ತು. ಬ್ರಿಟೀಷರನ್ನು ಉಪವಾಸದಿಂದಲೇ ಮಣಿಸುತ್ತಿದ್ದರು. ಗಾಂಧೀಜಿಯವರು ಭಗವದ್ಗೀತೆಯಿಂದ ಹೆಚ್ಚು ಪ್ರಭಾವಿತರಾಗಿದ್ದರು. ರಾಷ್ಟ್ರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದರು. ಮುಂದಿನ ಪೀಳಿಗೆಯು ಅವರ ವ್ಯಕ್ತಿತ್ವವನ್ನು ಅಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಹೆಚ್.ಟಿ ಶೈಲಜ ಗಾಂಧೀಜಿವರು ಇಂದು ನಮ್ಮೊಡನೆ ಇಲ್ಲದಿದ್ದರೂ ಅವರ ಜೀವನದ ಮೌಲ್ಯಗಳು ನಮ್ಮೊಂದಿಗಿವೆ. ಅವರು ದೈವದತ್ತವಾದ ವಿಶೇಷವ್ಯಕ್ತಿ. ಅವರ ಜೀವನವೇ ನಮಗೆ ಒಂದು ಸಂದೇಶ. ದೈವವನ್ನು ನೆನೆಯುತ್ತಾ ಯಾವುದೇ ಕೆಲಸ ಕೈಗೊಂಡರೂ ಅದು ನೆರವೇರುತ್ತದೆ ಎಂದು ತಮ್ಮ ಅನುಯಾಯಿಗಳಿಗೆ ಹೇಳುತ್ತಿದ್ದರು. ಗಾಂಧೀಜಿಯವರ ಜನ್ಮದಿನವನ್ನು ವಿಶ್ವಸಂಸ್ಥೆಯು ವಿಶ್ವ ಅಹಿಂಸಾ ದಿನಾಚರಣೆಯನ್ನಾಗಿ ಆಚರಿಸುತ್ತಿದೆ. ಗಾಂಧೀಜಿಯವರ ಬದುಕಿನ ಮೌಲ್ಯಗಳನ್ನು ನೆನೆಯುತ್ತಾ ವಿದ್ಯಾರ್ಥಿಗಳು ತಮ್ಮ ಕಾರ್ಯದಲ್ಲಿ ಯಶಸ್ಸು ಸಾಧಿಸಬೇಕೆಂದು ತಿಳಿಸಿದರು.

ರಾಷ್ಟ್ರಕಂಡ ಅಪರೂಪದ ನಾಯಕರಾದ ಲಾಲ್ ಬಹದ್ದೂಶಾಸ್ತ್ರೀಯವರನ್ನು ನೆನೆಯುತ್ತಾ ಅವರ ಸರಳತೆ ಹಾಗೂ ಪ್ರಾಮಾಣಿಕತೆಯನ್ನು ಇಂದಿನ ಪೀಳಿಗೆಯವರು ಅನುಸರಿಸಬೇಕೆಂದು ತಿಳಿಸಿದರು.

ಹಿರಿಯರಾದ ನಾಗರಾಜು ಹಿರಿಯರ ದಿನಾಚರಣೆಯ ಕುರಿತು ಮಾತನಾಡಿದರು.  ವೇದಿಕೆಯಲ್ಲಿ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅರುಣ್ ಬಳಮಟ್ಟಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರುಗಳಾದ ಜಿ.ಎಲ್. ತ್ರಿಪುರಾಂತಕ, ಸಂಪತ್ತ, ವೀರಭದ್ರಯ್ಯ, ಡಾ.ಎಂ.ಸಿ.ನಟರಾಜ, ಸಿ.ಎಸ್. ಶಿವಸ್ವಾಮಿ, ಜಿ.ಶಿವಮಲ್ಲು, ಬಿ.ಎಂ. ಸಿದ್ದಪ್ಪ, ಸಿ.ಪಿ.ನಿರ್ಮಲ, ಹಾಗೂ ಜಿ.ಎಂ.ಷಡಕ್ಷರಿ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜೆ.ಜಿ. ರಾಜಣ್ಣ ಸ್ವಾಗತಿಸಿದರು. ಶ್ರೀನಿವಾಸ್ ಮಂಕಣಿ ವಂದಿಸಿದರು. ಹೆಚ್.ವಿ. ದಿವ್ಯ ನಿರೂಪಿಸಿದರು.(ಎಸ್.ಎಚ್)

Leave a Reply

comments

Related Articles

error: