ಮೈಸೂರು

ಪ್ರಧಾನಿ ನರೇಂದ್ರ ಮೋದಿಯವರಿಗೆ ಅಪಮಾನ : ಸಾಮಾಜಿಕ ಜಾಲತಾಣಗಳ ವಿರುದ‍್ಧ ಕ್ರಮಕ್ಕೆ ಒತ್ತಾಯ

ಮೈಸೂರು,ಅ.2 : ಪ್ರಧಾನಿ ನರೇಂದ್ರ ಮೋದಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನ ಹಾಗೂ ಮುಜುಗರಕ್ಕೀಡು ಮಾಡುತ್ತಿದ್ದು ಅಂತಹ ತಾಣ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಲೀಗಲ್ ಮತ್ತು ಪಾರ್ಲಿಮೆಂಟರಿ ಸೆಲ್ ಕೋ ಕನ್ವೇಯರ್ ಸತ್ಯಮೂರ್ತಿ ಎಂ ಚಿಟ್ಟಿ ಸೈಬರ್ ಕ್ರೈಮ ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮನವಿ ಪತ್ರ ನೀಡಿದ್ದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ತುಣಕುಗಳು, ಪಿಕ್ಚರ್ಸ್, ಅನಿಮೇಷನ್, ಪಠ್ಯ ಸಂದೇಶಗಳ ರೀತಿಯಲ್ಲಿ ಅವಮಾನ ಮಾಡುತ್ತಿದ್ದು, ಅದರಂತೆ ಪಿಕ್ಟೋರಿಯಲ್ ರೆಪ್ರೆಸೆಂಟೇಷನ್ಕ ವಾಯ್ಸ್ ಸಂದೇಶಗಳು ಹರಿದಾಡುತ್ತಿವೆ, ಅಲ್ಲದೇ ಹಲವು ಪೇಜ್ ಗಳಲ್ಲಿ ಅವರ ವಿರುದ್ಧ ತೇಜೋವಧೆ ನಡೆಯುತ್ತಿದ್ದು ಇದರಿಂದ ಮುಜುಗರವಾಗುತ್ತಿದೆ ಆದ್ದರಿಂದ ಇಂತಹ ಸಾಮಾಜಿಕ ತಾಣಗಳ ನಿರ್ವಾಹಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯ ಮಾಡಿದ್ದಾರೆ.

Leave a Reply

comments

Related Articles

error: