ಮೈಸೂರು

ಅ.6ರಂದು ‘ವಿಜ್ಞಾನ -ಗಣಿತ’ ಕಲಿಕಾಸಕ್ತಿ ಮೂಡಿಸಲು ಸಂವಾದ

ಮೈಸೂರು,ಅ.2 : ಮೈಸೂರು ವಿಶ್ವವಿದ್ಯಾಲಯದ ‘ಶಾಲೆಗಳಲ್ಲಿ ವಿಜ್ಞಾನ ಅಭಿವೃದ್ಧಿ ಸಮಿತಿ’ ವತಿಯಿಂದ ಪ್ರೌಢಶಾಲಾ/ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಕಲಿಕಾಸ್ತಕಿ ಮೂಡಿಸುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಪ್ರತಿ ತಿಂಗಳ ಮೊದಲನೇ ಶನಿವಾರ ದಂದು ಮಧ್ಯಾಹ್ನ 2 ಗಂಟೆಯಿಂದ ಸಂವಾದ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಅದರಂತೆ ಅಕ್ಟೋಬರ್ ತಿಂಗಳ ಕಾರ್ಯಕ್ರಮವನ್ನು ದಿ.6ರ ಮಧ‍್ಯಾಹ್ನ 2 ಗಂಟೆಗೆ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಆಹಾರ ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಡಾ.ಭಾಗ್ಯಲಕ್ಷ್ಮಿ, ಭೌತವಿಜ್ಞಾನದ ನಿವೃತ್ತ ಪ್ರಾಧ‍್ಯಾಪಕ ಡಾ.ಎ.ವಿ.ಗೋಪಾಲ್ ರಾವ್, ಭೌತ ಶಾಸ್ತ್ರ ಪ್ರಾಧ‍್ಯಾಪಕ ಪ್ರೊ.ಕೆ.ಎಸ್.ಮಲ್ಲೇಶ್, ರಸಾಯನ ಶಾಸ್ತ್ರದ ನಿವೃತ್ತ ಪ್ರಾಧ‍್ಯಾಪಕ ಪ್ರೊ.ಶಶಿಕಾಂತ್, ಸಸ್ಯಶಾಸ್ತ್ರ ಪ್ರಾಧ‍್ಯಾಪಕ ಪ್ರೊ.ಜನಾರ್ಧನ್, ನಿವೃತ್ತ ಪ್ರಾಧ‍್ಯಾಪಕ ಪ್ರೊ.ಕೆ.ಎ.ರವೀಶ್, ಗಣಿತ ವಿಜ್ಞಾನದ ಡಾ.ರಂಗರಾಜನ್, ಪ್ರಾಣಿಶಾಸ್ತ್ರದ ಪ್ರೊ.ರಮೇಶ್ ಭಾಗವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: