ಸುದ್ದಿ ಸಂಕ್ಷಿಪ್ತ

ಗಂಗೋತ್ರಿ ಶಾಲೆಯಲ್ಲಿ ಕ್ರಿಸ್‍ಮಸ್‍ ಈವ್‍ ಆಚರಣೆ

ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಸ್ಕೂಲ್‍ನಲ್ಲಿ ಕ್ರಿಸ್‍ಮಸ್‍ ಮುನ್ನಾದಿನವಾದ ಡಿ.24ರಂದು ಕ್ರಿಸ್‍ಮಸ್‍ ಈವ್‍ ಪ್ರಯುಕ್ತ ‘ಕ್ರಿಸ್‍ಮಸ್‍ ಟ್ರೀ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಟಿ. ರಂಗಪ್ಪನವರು ಮಾತನಾಡಿ, ನಮ್ಮ ಶಾಲೆಯಲ್ಲಿ ಸರ್ವಧರ್ಮ ಸಮನ್ವಯತೆ ಎನ್ನುವ ಹಾಗೆ ಎಲ್ಲ ಆಚರಣೆಗಳೂ ನಡೆದು ಬಂದಿರುತ್ತವೆ. ಅದರಂತೆ ಈ ವರ್ಷವೂ ನರ್ಸರಿ ಶಿಕ್ಷಕಿಯರಾದ ಶ್ರೀಮತಿ ಡೆಬೋರಾ, ನಂದಿನಿ, ಹೇಮಾವತಿ, ಶಿಲ್ಪ, ಮಾನಸ ಅವರ ಸಹಕಾರದಿಂದ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಂತ ಜೀಸಸ್ ಜನನದಿಂದ ಪ್ರಪಂಚದಲ್ಲಿ ಪ್ರೀತಿ, ಪ್ರೇಮ, ಸಹಬಾಳ್ವೆಯ ಉಗಮವಾಯಿತು ಹಾಗೂ ತ್ಯಾಗ ಮನೋಭಾವದ ಪ್ರತೀಕವಾದ ಈ ಹಬ್ಬವು ಎಲ್ಲರ ಜೀವನದಲ್ಲಿ ಸುಖ ಸಂತೋಷವನ್ನು ನೀಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಕಾಂತಿನಾಯಕ್‍, ಸಹ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಝರಿನಾ ಬಾಬೂಲ್, ಶಿಕ್ಷಕ ಶಿಕ್ಷಕರಿಯರ ವೃಂದ ಭಾಗವಹಿಸಿತ್ತು.

ಮಕ್ಕಳು ಜೀಸಸ್ ಹುಟ್ಟಿನ ಕಥಾ-ಅವತರಣಿಯನ್ನು ತಂದೆ ಜೋಸೆಫ್‍ ತಾಯಿ ಮೇರಿಯ ಪಾತ್ರಧಾರಿಗಳಾಗಿ ಅಭಿನಯಿಸಿದರು.

Leave a Reply

comments

Related Articles

error: